ದೇಶ ವಿದೇಶ

ಭಾರತೀಯರ 39 ಮೃತದೇಹಗಳನ್ನು ಮರಳಿ ತರಲು ಇರಾಕ್ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ: ವಿಕೆ ಸಿಂಗ್

ನವದೆಹಲಿ: ಇಸಿಸ್ ಉಗ್ರರಿಂದ ಅಪಹರಣಕ್ಕೊಳಗಾಗಿ ಹತ್ಯೆಗೀಡಾಗಿದ್ದ 39 ಭಾರತೀಯ ಮೃತದೇಹಗಳನ್ನು ಮರಳಿ ತರಲು ಇರಾಕ್ ಸರ್ಕಾರ ಒಪ್ಪಿಗಾಗಿ ಕಾಯುತ್ತಿದ್ದೇವೆಂದು ವಿದೇಶಾಂಗ ಖಾತೆಗಳ ರಾಜ್ಯ ಸಚಿವ ಜನರಲ್ ವಿ.ಕೆ. ಸಿಂಗ್ ಅವರು ಇಂದು ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು 39 ಭಾರತೀಯ ಮೃತದೇಹಗಳ ಹಸ್ತಾಂತರ ಕುರಿತಂತೆ ಕಾನೂನಾತ್ಮಕ ಪ್ರಕ್ರಿಯೆಗಳು ಮುಕ್ತಾಯಗೊಂಡಿದ್ದು ಮೃತದೇಹಗಳನ್ನು ಭಾರತಕ್ಕೆ ತರಲು ನವದೆಹಲಿ ಬಾಗ್ದಾದ್ ನ ಒಪ್ಪಿಗೆಗಾಗಿ ಕಾಯುತ್ತಿದೆ ಎಂದು ಹೇಳಿದ್ದಾರೆ.

39 ಭಾರತೀಯರ ಅವಶೇಷಗಳ ಕುರಿತ ಕಾನೂನಾತ್ಮಕ ಪ್ರಕ್ರಿಯೆಗಳು ಈಗಾಗಲೇ ಪೂರ್ಣಗೊಂಡಿದ್ದು ನವದೆಹಲಿ ಇದೀಗ ಬಾಗ್ದಾದ್ ಒಪ್ಪಿಗೆಗಾಗಿ ಕಾಯುತ್ತಿದೆ. ಬಾಗ್ದಾದ್ ರಾಯಭಾರಿಗಳು ಒಪ್ಪಿಗೆ ನೀಡುತ್ತಿದ್ದಂತೆಯೇ ಸಿ-17 ವಿಮಾನದ ಮೂಲಕ ಇರಾಕ್ ತೆರಳಿ ಅವಶೇಷಗಳನ್ನು ಭಾರತಕ್ಕೆ ತರಲಾಗುತ್ತದೆ. ನಂತರ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಗುತ್ತದೆ. ಮೃತರ ಕುಟುಂಬಸ್ಥರು ವಿಮಾನ ನಿಲ್ದಾಣಕ್ಕೆ ಬರುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.

 

 

About the author

ಕನ್ನಡ ಟುಡೆ

Leave a Comment