ಅ೦ತರಾಷ್ಟ್ರೀಯ

ಭಾರತೀಯ ಪೈಲಟ್ ಬಿಡುಗಡೆ ಮಾಡುವಂತೆ ಪಾಕ್ ಲೇಖಕಿ ಮನವಿ

ವಾಷಿಂಗ್ಟನ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕಿಸ್ತಾನ ಬಂಧಿಯಾಗಿರಿಸಿರುವ ಭಾರತೀಯ ಪೈಲಟ್ ಅಭಿನಂದನ್ ವರ್ತಮಾನ್  ಅವರನ್ನು ಬಿಡುಗಡೆ ಮಾಡುವಂತೆ ಮಾಜಿ ಪಾಕಿಸ್ತಾನ ಪ್ರಧಾನ ಮಂತ್ರಿ ಜುಲ್ಫಿಕರ್ ಅಲಿ ಭುಟ್ಟೋ ಅವರ ಮೊಮ್ಮಗಳು ಹಾಗೂ ಲೇಖಕಿ ಫಾತಿಮಾ ಭುಟ್ಟೋ ವಿನಂತಿಸಿಕೊಂಡಿದ್ದಾರೆ.

ಪಾಕಿಸ್ತಾನ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರಲ್ಲಿ ಫಾತಿಮಾ ಮನವಿ ಮಾಡಿಕೊಂಡಿದ್ದು, ಉಭಯ ದೇಶಗಳು ಶಾಂತಿ ಕಾಪಾಡಿಕೊಳ್ಳುವಂತೆ ಕರೆ ನೀಡಿದ್ದಾರೆ. ಫೆಬ್ರವರಿ 27ರಂದು ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸಿದ ವೇಳೆ ಮಿಗ್ 21 ವಿಮಾನ ಪತನಗೊಂಡಿದ್ದು, ಪೈಲಟ್ ಅಭಿನಂದನ್ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಬಿದ್ದಿದ್ದರು. ಬಳಿಕ ಪಾಕ್ ಸೇನೆಯು ವಶಕ್ಕೆ ತೆಗೆದುಕೊಂಡಿತ್ತು.

ಭಾರತ ಈಗಾಗಲೇ ಪೈಲಟ್ ಅಭಿನಂದನ್ ಸುರಕ್ಷಿತ ಹಾಗೂ ಶೀಘ್ರ ವಾಪಾಸ್ ಕರೆ ತರಲು ರಣತಾಂತ್ರಿಕ ಹಾಗೂ ರಾಜತಾಂತ್ರಿಕ ತಂತ್ರವನ್ನು ಆರಂಭಿಸಿದೆ. ನಾನು ಹಾಗೂ ಇನ್ನಿತರ ಪಾಕಿಸ್ತಾನದ ಯುವ ಜನತೆಯು ಭಾರತೀಯ ಪೈಲಟ್‌ರನ್ನು ಬಿಡುಗಡೆ ಮಾಡಲು ಬಯಸುತ್ತೇವೆ. ಈ ಮೂಲಕ ಶಾಂತಿ ಹಾಗೂ ಮಾನವೀಯತೆಯತ್ತ ನಮ್ಮ ಬದ್ದತೆಯನ್ನು ತೋರ್ಪಡಿಸಬೇಕು ಎಂದರು.

ನಾವು ಯುದ್ಧದಲ್ಲೇ ಜೀವಮಾನ ಕಳೆದಿದ್ದೇವೆ. ಪಾಕಸ್ತಾನ ಹಾಗೂ ಭಾರತೀಯ ಸೈನಿಕರು ಸಾವನ್ನಪ್ಪುವುದನ್ನು ನೋಡಲು ಬಯಸಲಾರೆ. ನಾವು ಉಪಖಂಡವನ್ನು ಅನಾಥರನ್ನಾಗಿಸಲು ಬಯಸುತ್ತಿಲ್ಲ ಎಂದು ಮಾಜಿ ಪ್ರಧಾನಿ ಬೆನೆಜಿರ್ ಭುಟ್ಟೋ ಮೊಮ್ಮಗಳು ಕೂಡಾ ಆಗಿರುವ ಫಾತಿಮಾ ತಿಳಿಸಿದರು. ಪಾಕಿಸ್ತಾನದ ನನ್ನ ಪೀಳಿಗೆಯವರು ಮಾತಿನ ಹಕ್ಕಿಗಾಗಿ ಹೋರಾಡುತ್ತಿದ್ದಾರೆ. ಹಾಗಾಗಿ ಶಾಂತಿಗಾಗಿ ನಮ್ಮ ಸ್ವರವನ್ನು ಎತ್ತಲು ಹಿಂಜರಿಯಲಾರೆರು ಎಂದು ಉಲ್ಲೇಖಿಸಿದ್ದಾರೆ.

About the author

ಕನ್ನಡ ಟುಡೆ

Leave a Comment