ರಾಷ್ಟ್ರ ಸುದ್ದಿ

ಭಾರತೀಯ ವಾಯುಪಡೆಗೆ ಸೆಲ್ಯೂಟ್: ರಾಹುಲ್ ಟ್ವೀಟ್

ನವದೆಹಲಿ: ಪುಲ್ವಾಮಾದಲ್ಲಿ ಜೈಶ್ ಎ ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ದಾಳಿ ನಡೆದು 12 ದಿನಗಳ ನಂತರ ಭಾರತ-ಪಾಕ್ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನೆ ವಾಯುದಾಳಿ  ನಡೆಸಿದೆ ಎಂಬ ಬಗ್ಗೆ ವರದಿಗಳು ಬರುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯ ವಾಯುಪಡೆಗೆ ಅಭಿನಂದನೆ ಹೇಳಿದ್ದಾರೆ.
ಇಂದು ನಸುಕಿನ ಜಾವ ಭಾರತೀಯ ವಾಯುಸೇನೆ ಪಾಕಿಸ್ತಾನ ಗಡಿಭಾಗದಲ್ಲಿ ವಾಯುದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆಯಾದರೂ ಭಾರತೀಯ ಸೇನೆಯಿಂದಾಗಲಿ, ಸರ್ಕಾರದಿಂದಾಗಲಿ ಇನ್ನೂ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. 12 ಮೀರಜ್ 2000 ಯುದ್ಧ ವಿಮಾನ ಸುಮಾರು 1000 ಕೆಜೆ ಬಾಂಬ್ ಗಳನ್ನು ಜೈಶ್ ಎ ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ತರಬೇತಿ ತಾಣದ ಮೇಲೆ ದಾಳಿ ನಡೆಸಿ ಸುಟ್ಟುಹಾಕಿದೆ ಎನ್ನಲಾಗುತ್ತಿದೆ. ಈ ವಾಯುದಾಳಿ ಸಂಪೂರ್ಣ ಯಶಸ್ವಿಯಾಗಿದೆ ಎಂದು ಮೂಲಗಳಿಂದ ತಿಳಿದುಬಂದಿದೆ,

About the author

ಕನ್ನಡ ಟುಡೆ

Leave a Comment