ರಾಷ್ಟ್ರ ಸುದ್ದಿ

ಭಾರತೀಯ ಸೇನೆ ದಾಳಿಗೆ 10 ಪಾಕ್ ಸೈನಿಕರು ಬಲಿ, 7 ಪಾಕಿಸ್ತಾನಿ ಸೇನೆ ನೆಲೆ ಧ್ವಂಸ

ಜಮ್ಮು: ಜಮ್ಮು-ಕಾಶ್ಮೀರದ ರಾಜೌರಿ ಮತ್ತು ಪೂಂಚ್ ಜಿಲ್ಲೆಯ ಗಡಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ಗುರಿಯಾಗಿರಿಸಿಕೊಂಡು ಶೆಲ್ ದಾಳಿ ನಡೆಸಿದ್ದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮಂಗಳವಾರ ತಿರುಗೇಟು ನೀಡಿದ್ದು, ಗಡಿನಿಯಂತ್ರಣ ರೇಖೆ ಸಮೀಪದ 7 ಪಾಕಿಸ್ತಾನಿ ಪೋಸ್ಟ್ ಗಳನ್ನು ಧ್ವಂಸಗೊಳಿಸಿದೆ.

ಏತನ್ಮಧ್ಯೆ ಗಡಿನಿಯಂತ್ರಣ ರೇಖೆಯ ಸಮೀಪ ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ ಹತ್ತು ಪಾಕ್ ಸೈನಿಕರು ಸಾವನ್ನಪ್ಪಿದ್ದು, ಹಲವು ಮಂದಿ ಪಾಕ್ ಸೈನಿಕರು ಗಾಯಗೊಂಡಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ. ಭಾರತೀಯ ಸೇನೆ ದಾಳಿಗೆ ಪಾಕಿಸ್ತಾನದ ಸುಬೇದಾರ್ ಮುಹಮ್ಮದ್ ರಿಯಾಜ್, ಲ್ಯಾನ್ಸ್ ಹವಾಲ್ದಾರ್ ಅಝೀಜ್ ಉಲ್ಲಾ ಮತ್ತು ಶಾಹಿದ್ ಮನ್ ಸಿಬ್ ಸಾವನ್ನಪ್ಪಿರುವುದಾಗಿ ಪಾಕ್ ಟ್ವೀಟ್ ಮಾಡುವ ಮೂಲಕ ತಿಳಿಸಿದೆ. ಆದರೆ 10 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎಂಬ ವರದಿಯನ್ನು ಅಲ್ಲಗಳೆದಿದೆ.

ಪಾಕ್ ಶೆಲ್ ದಾಳಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಪೂಂಚ್ ಮತ್ತು ರಾಜೌರಿ ಜಿಲ್ಲೆಯ ಎಲ್ಲಾ ಶಾಲೆಗಳಿಗೂ ರಜೆ ನೀಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಗಡಿಭಾಗದಲ್ಲಿ ಪಾಕಿಸ್ತಾನಿ ಪಡೆಗಳು ನಡೆಸಿದ ಭಾರೀ ಶೆಲ್ ದಾಳಿಗೆ ಬಿಎಸ್ ಎಫ್ ಇನ್ಸ್ ಪೆಕ್ಟರ್ ಹಾಗೂ ಐದು ವರ್ಷದ ಮಗುವೊಂದು ಸೇರಿ ಮೂವರು ಸಾವನ್ನಪ್ಪಿದ್ದರು.

About the author

ಕನ್ನಡ ಟುಡೆ

Leave a Comment