ರಾಷ್ಟ್ರ

ಭಾರತ್‌ ಬಂದ್‌ : ಆಗ್ರಾದಲ್ಲಿ ಹಿಂಸೆ, ವಿವಿಧ ರಾಜ್ಯಗಳಲ್ಲಿ ರೈಲು ತಡೆ

ಹೊಸದಿಲ್ಲಿ : ಸುಪ್ರೀಂ ಕೋರ್ಟ್‌ ಸೂಚಿಸಿರುವ ಪ್ರಕಾರ ಎಸ್‌ಸಿ/ಎಸ್‌ಟಿ ಕಾಯಿದೆಯ ತಿದ್ದುಪಡಿಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ನಡೆಯುತ್ತಿರುವ ಭಾರತ್‌ ಬಂದ್‌ ಪ್ರಯುಕ್ತ ಆಗ್ರಾದಲ್ಲಿ ಇಂದು ಸೋಮವಾರ ಬೆಳಗ್ಗೆ ಪ್ರತಿಭಟನಕಾರರು ಭದ್ರತಾ ಸಿಬಂದಿಗಳೊಂದಿಗೆ ಸಂಘರ್ಷಕ್ಕೆ ಇಳಿದರು.  ಪಂಜಾಬ್‌, ಬಿಹಾರ ಮತ್ತು ಒಡಿಶಾದಲ್ಲಿ ಪ್ರತಿಭಟನಕಾರರು ರೈಲುಗಳನ್ನು ತಡೆದಿರುವ ವರದಿಗಳು ಬಂದಿವೆ.

ಹಿಂಸಾತ್ಮಕ ಪ್ರತಿಭಯನೆಯಲ್ಲಿ ಹಲವಾರು ಅಂಗಡಿಗಳನ್ನು ನಾಶಗೈಯಲಾಯಿತು. ಅನೇಕ ಪ್ರತಿಭಟನಕಾರರು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಎಸ್‌ಸಿ/ಎಸ್‌ಸಿ ಕಾಯಿದೆಯ ಪ್ರಸ್ತಾವಿತ ತಿದ್ದುಪಡಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಅನೇಕ ದಲಿತ ಸಮೂಹಗಳು ದೇಶಾದ್ಯಂತ ಇಂದು ಸೋಮವಾರ ಭಾರತ್‌ ಬಂದ್‌ ಗೆ ಕರೆ ನೀಡಿವೆ. ಆಗ್ರಾ ಮಾತ್ರವಲ್ಲದೆ ಪಂಜಾಬ್‌ ನ ಲೂಧಿಯಾನ ಮತ್ತು ಝಿರಾಕ್‌ಪುರ ಹಾಗೂ ಇತರ ಅನೇಕ ಭಾಗಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಇಂದು ಬೆಳಗ್ಗೆ ನಡೆದಿರುವ ವರದಿಗಳು ಬಂದಿವೆ.

ದೇಶದ ವಿವಿಧ ಕಡೆಗಳಲ್ಲಿ ರೈಲು ಸೇವೆ ಬಾಧಿತವಾಗಿದೆ.ಪ್ರತಿಭಟನಕಾರರು ರೈಲು ಹಳಿಗಳಲ್ಲಿ ಜಮಾಯಿಸಿ ರೈಲುಗಳ ಸಂಚಾರವನ್ನು ತಡೆದಿದ್ದಾರೆ. ಭಾರತ್‌ ಬಂದ್‌ ಭಾಗವಾಗಿ ಕೆಲವು ರಾಜ್ಯಗಳಲ್ಲಿ ಈ ಹಿಂಸಾತ್ಮಕ ಪ್ರತಿಭಟನೆಗಳ ಪರಿಣಾಮವಾಗಿ ಮಾರಕಟ್ಟೆಗಳು ಬಂದ್‌ ಆಗಿವೆ. ಅಂಗಡಿ ಮುಂಗಟ್ಟುಗಳು ಮುಚ್ಚಿವೆ.  ಭಾರತ್‌ ಬಂದ್‌ ಅಂಗವಾಗಿ ಬಿಹಾರದ ಅರ್ಹಾ ದಲ್ಲಿ ಸಿಪಿಎಂ ಲಿಬರೇಶನ್‌, ಅಥವಾ ಸಿಪಿಐ (ಎಂಎಲ್‌) ಸಂಘಟನೆಗಳ ಪ್ರತಿಭಟಕಾರರು ರೈಲುಗಳನ್ನು ತಡೆದಿರುವುದಾಗಿ ವರದಿಯಾಗಿದೆ.

About the author

ಕನ್ನಡ ಟುಡೆ

Leave a Comment