ರಾಜ್ಯ ಸುದ್ದಿ

ಭಾರತ್ ಬಂದ್: ರಜೆ ಘೋಷಣೆ ತೀರ್ಮಾನ ಆಯಾ ಶಾಲಾ-ಕಾಲೇಜುಗಳಿಗೆ ಬಿಟ್ಟದ್ದು

ಬೆಂಗಳೂರು: ದೇಶಾದ್ಯಂತ ಕಾರ್ಮಿಕರು ಮಂಗಳವಾರ ಹಾಗೂ ಬುಧವಾರ ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಎರಡು ದಿನಗಳ ರಜೆ ಘೋಷಣೆ ತೀರ್ಮಾನವನ್ನು ಆಯಾ ಶಾಲಾ-ಕಾಲೇಜುಗಳ ಆಡಳಿತಕ್ಕೆ ಬಿಡಲಾಗಿದೆ ಎಂದು ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಕಾರ್ಯದರ್ಶಿ ಶಶಿಕುಮಾರ್ ತಿಳಿಸಿದ್ದಾರೆ. ದೇಶಾದ್ಯಂತ ಮಂಗಳವಾರ ಹಾಗೂ ಬುಧವಾರ ಮುಷ್ಕರ ನಡೆಸಲು ಹಲವು ಕಾರ್ಮಿಕ ಸಂಘಟನೆಗಳು ನಿರ್ಧರಿಸಿದ್ದಾರೆ. ರಾಜ್ಯದಲ್ಲೂ ಎಲ್ಲಾ ಕಾರ್ಮಿಕರು ಈ ಮುಷ್ಕರದಲ್ಲಿ ಭಾಗಿಯಾಗುವ ಸಾಧ್ಯತೆಗಳಿವೆ. ಗಲಾಟೆ, ಗಲಭೆಗಳು ನಡೆಯುವ ಸಾಧ್ಯತೆಯಿದೆ. ಆದರಿಂದ ಮುಂಜಾಗೃತ ಕ್ರಮವಾಗಿ ಶಾಲಾ ಮಕ್ಕಳಿಗೆ ತೊಂದರೆ ಆಗಬಾರದೆಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಮುಷ್ಕರಕ್ಕೆ ಖಾಸಗಿ ಶಾಲೆಗಳು ಬೆಂಬಲ ಕೊಡುತ್ತಿದ್ದೇವೆ ಅಂತ ಅಂದುಕೊಳ್ಳಬೇಡಿ. ನಮಗೆ ಮಕ್ಕಳ ಸುರಕ್ಷತೆ ಮುಖ್ಯ. ಖಾಸಗಿ ಶಾಲೆಗಳ ಆಡಳಿತ ಒಕ್ಕೂಟದ ಸದಸ್ಯರು ಸೇರಿ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದರು.

About the author

ಕನ್ನಡ ಟುಡೆ

Leave a Comment