ದೇಶ ವಿದೇಶ

ಭಾರತ ಮಾಡಿದ ಆಕ್ರಮಣಕ್ಕೆ ತಕ್ಕ ಶಾಸ್ತಿ ಕಾದಿದೆ: ಪಾಕ್ ವಿದೇಶಾಂಗ ಸಚಿವ

ಇಸ್ಲಾಮಾಬಾದ್: ಗಡಿನಿಯಂತ್ರಣ ರೇಖೆ ದಾಟಿ ಭಾರತ ಆಕ್ರಮಣ ಮಾಡಿದ್ದು, ಸೂಕ್ತ ಸಮಯದಲ್ಲಿ  ಇಸ್ಲಮಾಬಾದ್ ತಕ್ಕ ಪ್ರತಿಕ್ರಿಯೆ ನೀಡಲಿದೆ ಎಂದು ಪಾಕ್ ವಿದೇಶಾಂಗ ಸಚಿವ ಶಾ ಮೊಹಮದ್ ಖುರೇಶಿ  ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಪುಲ್ವಾಮಾ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಕಳೆದ ರಾತ್ರಿ 3.30ರ ಸುಮಾರಿಗೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ನುಗ್ಗಿ ಏರ್ ಸ್ಟ್ರೈಕ್ ಮಾಡಿದ ನಂತರ ಪ್ರತಿಕ್ರಿಯೆ ನೀಡಿರುವ ಖುರೇಶಿ, ಭಾರತಕ್ಕೆ ಸೂಕ್ತ ಉತ್ತರ ನೀಡುವುದಾಗಿ ಹೇಳಿದ್ದಾರೆ. ಭಾರತದ ವೈಮಾನಿಕ ದಾಳಿಗೆ ತತ್ತರಿಸಿರುವ ಪಾಕಿಸ್ತಾನ, ತುರ್ತು ಸಭೆ ನಡೆಸಿ ಮುಂದಿನ ನಡೆಗಳ ಬಗ್ಗೆ ಚರ್ಚಿಸಿದೆ. ವೈಮಾನಿಕ ದಾಳಿಯ ಬಗ್ಗೆ ಸ್ವತಃ ಪಾಕಿಸ್ತಾನ ಒಪ್ಪಿಕೊಂಡಿದೆ, ಪುಲ್ವಾಮಾ ಉಗ್ರ ದಾಳಿ ನಡೆದು 49 ಯೋಧರು ಹುತಾತ್ಮರಾದ 12 ದಿನಕ್ಕೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ.

About the author

ಕನ್ನಡ ಟುಡೆ

Leave a Comment