ದೇಶ ವಿದೇಶ

ಭಾರತ ಮೂಲದ ಹಾರ್ವರ್ಡ್ ಪ್ರೊಫೆಸರ್ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯಸ್ಥರಾಗಿ ನೇಮಕ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಪ್ರಮುಖ ಹುದ್ದೆಗಳನ್ನು ಅಲಂಕರಿಸುತ್ತಿರುವವರ ಭಾರತೀಯ ಮೂಲದ ವ್ಯಕ್ತಿಗಳ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ. ಭಾರತ ಮೂಲದ ಹಾರ್ವರ್ಡ್ ಪ್ರೊಫೆಸರ್ ಗೀತಾ ಗೋಪಿನಾಥ್ ಐಎಂಎಫ್ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ. ರಘುರಾಮ್ ರಾಜನ್ ನಂತರ ಐಎಂಎಫ್ ನ  ಮುಖ್ಯ ಅರ್ಥಶಾಸ್ತ್ರಜ್ಞರಾಗಿ ನೇಮಕಗೊಳ್ಳುತ್ತಿರುವ ಎರಡನೇ ಭಾರತೀಯ ಮೂಲದ ವ್ಯಕ್ತಿ ಗೀತಾ ಗೋಪಿನಾಥ್ ಅವರಾಗಿದ್ದಾರೆ. 2018 ರ ಅಂತ್ಯಕ್ಕೆ ಹಾಲಿ ಮುಖ್ಯ ಅರ್ಥಶಾಸ್ತ್ರಜ್ಞರಾದ ಮೌರಿಸ್ (ಮೌರಿ) ಅಬ್ಸ್ಟ್ಫೆಲ್ಡ್ ನಿ ನಿವೃತ್ತರಾಗಲಿದ್ದಾರೆ. ಗೀತಾ ಗೋಪಿನಾಥ್ ಅವರು ಪ್ರಸ್ತುತ ಹಾರ್ವರ್ಡ್ ವಿವಿಯ ಜಾನ್ ಜ್ವಾನ್ಸ್ಟ್ರಾ ಆಫ್ ಇಂಟರ್ ನ್ಯಾಷನಲ್ ಸ್ಟಡೀಸ್, ಎಕನಾಮಿಕ್ಸ್ ವಿಭಾಗದ ಪ್ರೊಫೆಸರ್ ಆಗಿದ್ದಾರೆ. 2016 ರಲ್ಲಿ ಗೀತಾ ಗೋಪಿನಾಥನ್ ಅವರನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆರ್ಥಿಕ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಆದರೆ ಗೀತಾ ಗೋಪಿನಾಥ್ ಅವರು ಮಾರುಕಟ್ಟೆ ಆರ್ಥಿಕತೆ ಮತ್ತು ಉದಾರ ನೀತಿಗಳನ್ನು ಹೆಚ್ಚು ಉತ್ತೇಜಿಸುತ್ತಿದ್ದರಾದ್ದರಿಂದ  ಸಿಪಿಎಂ ನಾಯಕರು ಆಕೆಯ ನೇಮಕಾತಿಯನ್ನು ವಿರೋಧಿಸಿದ್ದರು. ದೆಹಲಿ ವಿವಿಯಿಂದ ಬಿಎ ಪದವಿ ಪಡೆದ ಬಳಿಕ ಗೀತಾ ಗೋಪಿನಾಥ್ ಅವರು ಪ್ರಿನ್ಸ್ಟನ್ ವಿಶ್ವವಿದ್ಯಾಲಯದಿಂದ ಅರ್ಥಶಾಸ್ತ್ರ ವಿಭಾದಲ್ಲಿ ಪಿಹೆಚ್ ಡಿ ಪದವಿ ಪಡೆದಿದ್ದರು. 2005 ರಲ್ಲಿ ಹಾರ್ವರ್ಡ್ ವಿವಿಯನ್ನು ಸೇರಿದ್ದರು.

About the author

ಕನ್ನಡ ಟುಡೆ

Leave a Comment