ರಾಷ್ಟ್ರ ಸುದ್ದಿ

ಭಾರತ ಸೇನೆಯಿಂದ ಮೂವರ ಉಗ್ರರ ಹತ್ಯೆ, ಒರ್ವ ಪೋಲಿಸ್ ಸಿಬ್ಬಂದ್ದಿಗೆ ಗಾಯ

ಶ್ರೀನಗರ: ಶನಿವಾರ ಬೆಳಗಿನ ಜಾವ ಸೋಪುರದಲ್ಲಿ ನಡೆಸಿದ ಕಾರ್ಯಾಚರಣೆಯ ವೇಳೆ ಭಾರತೀಯ ಸೇನೆಯು ಲಷ್ಕರ್‌-ಇ-ತೋಯ್ಬಾ ಉಗ್ರ ಸೈನ್ಯದ ಮೂರು ಉಗ್ರರನ್ನು ಹತ್ಯೆಗೈಯಲಾಗಿದೆ. ಕಾರ್ಯಾಚರಣೆ ವೇಳೆ ಓರ್ವ ಪೊಲೀಸ್‌ ಸಿಬ್ದಂದಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಉಗ್ರರ ಅಡಗು ತಾಣವಾದ ಸೋಪುರದ ಮೇಲೆ  ನಸುಕಿನ 4.30 ರ ವೇಳೆಗೆ ಸಿಆರ್‌ಪಿಎಫ್ ನ 179 ನೇ ಬೆಟಾಲಿಯನ್‌ ಮತ್ತು 52 ನೇ ರಾಷ್ಟ್ರೀಯ ರೈಫ‌ಲ್ಸ್‌,ವಿಶೇಷ ಕಾರ್ಯಾಚರಣೆ ಪಡೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ  ಪೊಲೀಸ್‌ ಸಿಬಂದಿ ಗಾಯಗೊಂಡಿರುವುದಾಗಿ ಉತ್ತರ ಕಾಶ್ಮೀರದ ಐಜಿಪಿ ನಿತೀಶ್‌ ಕುಮಾರ್‌ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment