ರಾಷ್ಟ್ರ

ಭಾರತ ಹಿಂದುಳಿಯಲು 5 ರಾಜ್ಯಗಳು ಕಾರಣ: ನೀತಿ ಆಯೋಗ ಸಿಇಓ

ನವದೆಹಲಿ: ಭಾರತ ಹಿಂದುಳಿದಿರುವುದಕ್ಕೆ ಬಿಹಾರ,ಉತ್ತರ ಪ್ರದೇಶ, ಮಧ್ಯಪ್ರದೇಶ, ಮತ್ತು ರಾಜ್ಯಸ್ಥಾನ ಛತ್ತೀಸ್ಗಢ ರಾಜ್ಯಗಳೇ ಕಾರಣ ಎಂದು ಆಯೋಗದ ಸಿಇಓ ಅಮಿತಾಭ್ ಕಾಂತ್ ಇಂದು  ಹೇಳಿದ್ದಾರೆ. “ವಿಶೇಷವಾಗಿ ಸಾಮಾಜಿಕ ಅಭಿವೃದ್ಧಿ  ರಂಗದಲ್ಲಿ ಭಾರತ ಹಿಂದುಳಿಯಲು ದೇಶದ ಪೂರ್ವ ಭಾಗದ ರಾಜ್ಯಗಳಾದ ಬಿಹಾರ,ಯುಪಿ,ಛತ್ತೀಸ್’ಗಡ್ ಎಂಪಿ,ಮತ್ತು ರಾಜಸ್ಥಾನ ರಾಜ್ಯಗಳೇ ಕಾರಣವಾಗಿವೆ” ಎಂದು ಹೇಳಿದರು.

ಜಾಮೀಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಏರ್ಪಟ್ಟಿದ ಮೊದಲ ಖಾನ್ ಅಬ್ದುಲ್ ಗಫರ್ ಖಾನ್ ಮೆಮೋರಿಯಲ್ ಲೆಕ್ಚರ್’ನಲ್ಲಿ ಕಾಂತ್ ಅವರಿಂದ  ಈ ಹೇಳಿಕೆ ಬಂದಿದೆ.ಭಾರತವು ಸುಲಲಿತ ಉದ್ಯಮವೇ ಮೊದಲಾದ ಆರ್ಥಿಕ ರಂಗದಲ್ಲಿ ಉತ್ತಮ ಪ್ರಗತಿಯನ್ನು ತೋರಿದೆಯಾದರೂ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದುಳಿದಿದೆ ಎಂದು ಹೇಳಿದರು.

 

 

About the author

ಕನ್ನಡ ಟುಡೆ

Leave a Comment