ರಾಷ್ಟ್ರ ಸುದ್ದಿ

ಭಾರಿ ಪ್ರಮಾಣದ ಭಕ್ತರ ನಿರ್ವಹಣೆ; ಗಿನ್ನೆಸ್ ದಾಖಲೆ ಬರೆದ ಕುಂಭಮೇಳ

ಪ್ರಯಾಗ್ ರಾಜ್: ಉತ್ತರ ಪ್ರದೇಶದ ಸಂಗಮದಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕೆ ಇಂದು ಕೊನೆಯ ದಿನವಾಗಿರುವಂತೆಯೇ 2019ರ ಕುಂಭಮೇಳ ಗಿನ್ನೆಸ್ ದಾಖಲೆ ಪುಟ ಸೇರಿದೆ. ಹೌದು ಈ ಬಗ್ಗೆ ಸ್ವತಃ ಸರ್ಕಾರ ಘೋಷಣೆ ಮಾಡಿದ್ದು, ಪ್ರಯಾಗ್ ರಾಜ್ ನಲ್ಲಿ ನಡೆದ ಮಹಾ ಕುಂಭಮೇಳೆ ಹಲವು ವಿಭಾಗಗಳಲ್ಲಿ ಗಿನ್ನೆಸ್ ವಿಶ್ವದಾಖಲೆ ನಿರ್ಮಾಣ ಮಾಡಿದ್ದು, ವಿಶ್ವದ ಅತೀ ದೊಡ್ಡ ಪ್ರಮಾಣದ ಜನರ ನಿರ್ವಹಣೆ ವಿಭಾಗಲ್ಲಿ ಕುಂಭಮೇಳ ಗಿನ್ನೆಸ್ ವಿಶ್ವ ದಾಖಲೆ ನಿರ್ಮಾಣ ಮಾಡಿದೆ. ಇದಲ್ಲದೇ ಅತೀ ದೊಡ್ಡ ಪ್ರಮಾಣದ ಶೌಚಾಲಯ, ಸ್ವಚ್ಛತಾ  ವ್ಯವಸ್ಥೆ ಹಾಗೂ ಅತೀ ದೊಡ್ಡ ಪ್ರಮಾಣದ  ಸಾರ್ವಜನಿಕ ಪೇಂಟಿಂಗ್ ಅಭಿಯಾನದಲ್ಲೂ ಕುಂಭಮೇಳೆ ದಾಖಲೆ ಬರೆದಿದೆ ಎಂದು ಸರ್ಕಾರ ಘೋಷಣೆ ಮಾಡಿದೆ. ಗಿನ್ನೆಸ್ ಸಂಸ್ಥೆಯ ಮೂವರು ಸದಸ್ಯರು ಪ್ರಯಾಗ್ ರಾಜ್ ಗೆ ಆಗಮಿಸಿ 4 ದಿನಗಳ ಪರಿಶೀಲನೆ ಮಾಡಿದ ಬಳಿಕ ದಾಖಲೆ ನಿರ್ಮಾಣವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.

About the author

ಕನ್ನಡ ಟುಡೆ

Leave a Comment