ಪರಿಸರ

ಭಾರೀ ಮಳೆ, ಸಿಡಿಲಿಗೆ ಇಬ್ಬರ ಸಾವು​​​​​​​

ಬೆಂಗಳೂರು: ರಾಜ್ಯದಲ್ಲಿ ಕೊಂಚ ಇಳಿಮುಖವಾದಂತೆ ಕಂಡುಬಂದ ಮಳೆ ಸೋಮವಾರ ಮತ್ತೆ ಅಬ್ಬರಿಸಿದೆ. ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಬಹುತೇಕ ಕಡೆ ಧಾರಾಕಾರವಾಗಿ ಗುಡುಗು ಸಹಿತ ಮಳೆಯಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ರಾಮನೋಡ್ಡಂಪಲ್ಲಿ ಮಧ್ಯಾಹ್ನ ಸಿಡಿಲು ಬಡಿದು ಜಾನುವಾರುಗಳನ್ನು ಮೇಯಿಸುತ್ತಿದ್ದ ರೈತರಿಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಮೃತರನ್ನು ರಾಮನೋಡ್ಡಂಪಲ್ಲಿ ನಿವಾಸಿಗಳಾದ ನರಸಿಂಹಪ್ಪ(60)ಹಾಗೂ ಸದಾಶಿವ (48) ಎಂದು ಗುರುತಿಸಲಾಗಿದೆ. ದನಕರುಗಳನ್ನು ಮೇಯಿಸುತ್ತಿದ್ದ ವೇಳೆ ಮಳೆ ಬಂದಿದ್ದು, ಈ ವೇಳೆ ಹತ್ತಿರವಿದ್ದ ಪಾಳುಬಿದ್ದ ಕಟ್ಟಡಕ್ಕೆ ತೆರಳುವಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆಂದು ಗ್ರಾಮಸ್ಥರು ತಿಳಿಸಿದ್ದಾರೆ.

ಕಳೆದ ಮೂರ್‍ನಾಲ್ಕು ದಿನಗಳಿಂದ ದಕ್ಷಿಣ ಒಳನಾಡಿನಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಮಾರ್ಚ್‌ ಅಂತ್ಯಕ್ಕೆ ವಾಡಿಕೆಗಿಂತ ನಾಲ್ಕುಪಟ್ಟು ಮಳೆಯಾಗಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ ವಾಡಿಕೆ ಮಳೆ 8.5 ಮಿ.ಮೀ. ಆದರೆ, ಬಿದ್ದದ್ದು 32.1 ಮಿ.ಮೀ. ಇನ್ನೂ ಎರಡು ದಿನ ಇದೇ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.

ಉತ್ತರದ ಛತ್ತೀಸ್‌ಗಡದಿಂದ ರಾಜ್ಯದ ಒಳನಾಡಿನಲ್ಲಿ ಕಡಿಮೆ ಒತ್ತಡದ ತಗ್ಗು ಹಾದುಹೋಗಿದೆ. ಜತೆಗೆ ಇದೇ ಭಾಗದಲ್ಲಿ ಮೇಲ್ಮೆ„ ಸುಳಿಗಾಳಿ ಉಂಟಾಗಿದೆ. ಇದರಿಂದ ಸತತ ನಿರಂತರವಾಗಿ ಮಳೆಯಾಗುತ್ತಿದೆ. ಇನ್ನೂ ಎರಡು ದಿನ ಇದು ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕಚೇರಿ ತಿಳಿಸಿದೆ.

ಸೋಮವಾರ ಸಂಜೆ ಚಿಕ್ಕಬಳ್ಳಾಪುರದಲ್ಲಿ 58 ಮಿ.ಮೀ., ಹಾಸನ 43, ತುಮಕೂರು 59, ಬೆಂಗಳೂರು ಗ್ರಾಮಾಂತರ 36.5, ಬಳ್ಳಾರಿ 33, ಚಿತ್ರದುರ್ಗ 27.4, ಕೋಲಾರ 28, ಮಂಡ್ಯ 18.3, ಮೈಸೂರು 23 ಮಿ.ಮೀ. ಮಳೆ ದಾಖಲಾಗಿದೆ.

 

About the author

ಕನ್ನಡ ಟುಡೆ

Leave a Comment