ರಾಷ್ಟ್ರ

ಭ್ರಷ್ಟಾಚಾರ ವಿಚಾರಣೆ ಎದುರಿಸುತ್ತಿರುವ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ಇಲ್ಲ

ದಿಲ್ಲಿ: ಭ್ರಷ್ಟಾಚಾರ ಆರೋಪದಲ್ಲಿ ವಿಚಾರಣೆಗೆ ಗುರಿಯಾಗಿರುವ ಅಥವಾ ಎಫ್‌ಐಆರ್ ದಾಖಲಾಗಿರುವ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ ನಿರಾಕರಿಸಲು ಸರಕಾರ ನಿರ್ಧರಿಸಿದೆ.

ಅಂತಹ ಅಧಿಕಾರಿಗಳಿಗೆ ಪಾಸ್‌ಪೋರ್ಟ್‌ಗೆ ಅಗತ್ಯವಿರುವ ವಿಜಿಲೆನ್ಸ್‌ ಕ್ಲಿಯರೆನ್ಸ್ ನೀಡಲಾಗದು ಎಂದು ಪರಿಷ್ಕೃತ ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಅಪರಾಧ ವಿಚಾರಣೆ ಪ್ರಕ್ರಿಯೆ ನಡೆಯುತ್ತಿರುವಾಗ ಪಾಸ್‌ಪೋರ್ಟ್‌ಗೆಅಗತ್ಯವಿರುವ ವಿಜಿಲೆನ್ಸ್‌ ಕ್ಲಿಯರೆನ್ಸ್‌ ನಿರಾಕರಣೆ ಹೊಸತೇನೂ ಅಲ್ಲ. ಈ ನಿಯಮವನ್ನು ಸದ್ಯ ಭ್ರಷ್ಟಾಚಾರ ತಡೆ ಕಾಯ್ದೆ ಅಥವಾ ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಸರಕಾರಿ ಅಧಿಕಾರಿಗಳಿಗೂ ವಿಸ್ತರಿಸಲಾಗಿದೆ ಅಷ್ಟೆ.

ಖಾಸಗಿ ದೂರುಗಳನ್ನು ಆಧರಿಸಿ ಎಫ್‌ಐಆರ್‌ ದಾಖಲಾಗಿದ್ದರೆ, ತನಿಖಾ ಸಂಸ್ಥೆ ಆರೋಪ ಪಟ್ಟಿ ದಾಖಲಿಸಿರಬೇಕು. ಹಾಗಿದ್ದರೂ ಖಾಸಗಿ ದೂರಿನ ಬಗ್ಗೆ ಪಾಸ್‌ಪೋರ್ಟ್‌ ಕಚೇರಿಗೆ ಮಾಹಿತಿ ನೀಡಲಾಗಿದ್ದರೆ, ಅಂತಹ ಸಂದರ್ಭದಲ್ಲಿ ಅಂತಿಮ ನಿರ್ಧಾರ ಪಾಸ್‌ಪೋರ್ಟ್‌ ನೀಡುವ ಪ್ರಾಧಿಕಾರಕ್ಕೆ ಸೇರಿರುತ್ತದೆ.

 

About the author

ಕನ್ನಡ ಟುಡೆ

Leave a Comment