ರಾಜ್ಯ ಸುದ್ದಿ

ಮಂಗಳೂರು: ನೀರಿನ ಟ್ಯಾಂಕ್​ಗೆ ಬಿದ್ದು ಮೂವರು ಮಕ್ಕಳ ಸಾವು

ಮಂಗಳೂರು: ನೀರಿನ ಟ್ಯಾಂಕಿಗೆ ಬಿದ್ದು ಮೂವರು ಮಕ್ಕಳು ಜಲ ಸಮಾಧಿಯಾಗಿರುವ ದಾರುಣ ಘಟನೆ ಬುಧವಾರ ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಪಾಣಾಜೆ ಸಮೀಪದ ಉಡ್ಡಂಗಳದಲ್ಲಿ ನಡೆದಿದೆ. ಮೃತ ಮಕ್ಕಳನ್ನು ವಿಶ್ಮಿತಾ(13), ಚೈತ್ರಾ (10) ಹಾಗೂ ಜಿತೇಶ್13)ಎಂದು ಗುರುತಿಸಲಾಗಿದೆ. ಈ ಮೂವರು ಮಕ್ಕಳು ಬೆಟ್ಟಂಪಾಡಿಯ ಮಿತ್ತಡ್ಕ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿದ್ದು, ಶಾಲೆಗೆ ರಜೆ ಇದ್ದ ಕಾರಣ ಆಟವಾಡಲು ಗ್ರಾಮದ ಪಂಚಾಯತ್ ನೀರು ಸರಬರಾಜು ಟ್ಯಾಂಕ್‌ಗೆ ಇಳಿದಿದ್ದರು. ನಂತರ ಮೇಲೆ ಬರಲು ಸಾಧ್ಯವಾಗದೇ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಈ ಸಂಬಂಧ ಪುತ್ತೂರು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the author

ಕನ್ನಡ ಟುಡೆ

Leave a Comment