ರಾಜ್ಯ ಸುದ್ದಿ

ಮಂಗಳೂರು ರ‍್ಯಾಲಿ: ಪ್ರಧಾನಿ ಮೋದಿಗೆ ​ಅಚ್ಚರಿ ತಂದ ಜನಸಾಗರ

ಮಂಗಳೂರು: ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ ಜನಸ್ತೋಮ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ  ನರೇಂದ್ರ ಮೋದಿ ನಾನು 2014ರಲ್ಲೂ ಅಲ್ಲಿಗೆ ಹೋಗಿದ್ದೆ. ಆಗ ಅಷ್ಟು ಜನ ಸೇರಿರಲಿಲ್ಲ. ಈ ಬಾರಿಯ ಜನ‌ ನೋಡಿ ಆಶ್ಚರ್ಯಚಕಿತನಾಗಿದ್ದೆ’ ಎಂದು ಹೇಳಿಕೊಂಡಿದ್ದಾರೆ. ವಾಸ್ತವದಲ್ಲಿ ಅದು ರೋಡ್ ಶೋ ಆಗಿರಲಿಲ್ಲ. ನಾನು ತನ್ನಷ್ಟಕ್ಕೆ ಮರಳುತ್ತಿದ್ದೆ. ಅಲ್ಲಿ ಜನಸ್ತೋಮ ಕಂಡು ಕಾರಿನಿಂದ ತಲೆ ಹೊರಗೆ ಹಾಕಿ ಕೈಬೀಸಿದೆ. ಅದನ್ನು ಮೇಲಿನಿಂದ ಯಾರೋ ವೀಡಿಯೊ ಮಾಡಿದ್ದಾರೆ. ಇವತ್ತು ಆ ವೀಡಿಯೊ ನೋಡುವಾಗ ಸಮುದ್ರದ ಅಲೆಯಂತೆ ಕಂಡಿದೆ ಎಂದು ಉತ್ತರಿಸಿದರು.

 

About the author

ಕನ್ನಡ ಟುಡೆ

Leave a Comment