ರಾಜಕೀಯ

ಲೋಕಸಭಾ ಚುನಾವಣಾ: ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಪಾದಯಾತ್ರೆ

ಮಂಗಳೂರು: ಲೋಕಸಭಾ ಚುನಾವಣಾ ಪ್ರಚಾರದ ಕಾವು ಜೋರಾಗತೊಡಗಿದ್ದು, ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಉತ್ತರ ಮಹಾ ಶಕ್ತಿ ಕೇಂದ್ರದ ವತಿಯಿಂದ ಮೈ ಭಿ ಚೌಕಿದಾರ್ ಹೂಂ ಕಾರ್ಯಕ್ರಮ ಬುಧವಾರ ನಡೆಯಿತು.

ಕೇಸರಿ ಪೇಟಾ ಧರಿಸಿದ ಸುಮಾರು 500ಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರು ಮೈ ಭಿ ಚೌಕಿದಾರ್ ಹೂ ಎಂದು ಘೋಷಣೆ ಕೂಗುತ್ತಾ ಪಾದಯಾತ್ರೆ ಮೂಲಕ ಸಾಗಿದ್ದರು.

ಮಂಗಳೂರಿನ ಪ್ರಸಿದ್ಧ ಕುದ್ರೋಳಿ ದೇವಸ್ಥಾನದಿಂದ ತೆರಳಿದ್ದ ಪಾದಯಾತ್ರೆ ಸೆಂಟ್ರಲ್ ಮಾರ್ಕೆಟ್ ರಥಬೀದಿಯಲ್ಲಿ ಸಮಾಪ್ತಿಗೊಂಡಿತ್ತು.

About the author

ಕನ್ನಡ ಟುಡೆ

Leave a Comment