ರಾಜಕೀಯ

ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಏನು, ಸಿಎಂ ಕುಮಾರಸ್ವಾಮಿ ಪ್ರಶ್ನೆ

ಮಂಡ್ಯ: ಒಂದೆಡೆ ನಟ, ರಾಜಕಾರಣಿ ಅಂಬರೀಶ್ ಪತ್ನಿ ಸುಮಲತಾ ಮಂಡ್ಯ ಲೋಕಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಟಿಕೆಟ್ ಗಾಗಿ ಲಾಬಿ ನಡೆಸಿದ್ದರೆ ಇತ್ತ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾತ್ರ ಮಂಡ್ಯಕ್ಕೆ ಅಂಬರೀಶ್ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಲೋಕಸಭೆ ಚುನಾವಣೆಗಾಗಿ ರಾಜ್ಯದ ಮೈತ್ರಿ ಸರ್ಲಾರಗಳ ಅಂಗಪಕ್ಷಗಳ ನಡುವೆ ಸೀಟು ಹಂಚಿಕೆ ಕುರಿತ ತೀರ್ಮಾನ ಇನ್ನೂ ಬಾಕಿ ಉದೆ. ಇದೇ ವಿಚಾರದಲ್ಲಿ ಎರಡೂ ಪಕ್ಷಗಳ ನಡುವೆ ಭಿನ್ನಾಭಿಪ್ರಾಯ ಸಹ ಹೊಗೆ ಆಡಲಿದೆ. ಮಂಡ್ಯ ಪ್ರವಾಸ ಕೈಗೊಂಡಿದ್ದ ಕುಮಾರಸ್ವಾಮಿ “ಅಂಬರೀಶ್ ಮಂಡ್ಯದಲ್ಲಿ ನಡೆಯಬೇಕಾಗಿದ್ದ ಅಭಿವೃದ್ದಿಉ ಕಾರ್ಯದ ಬಗ್ಗೆ ಗಮನ ನೀಡಿರಲಿಲ್ಲ. ಅವರ ಅಭಿಮಾನಿಗಳು ಕೆಲವರು ಅವರ ನಿಧನದಿಂದಗಿ ಭಾವನಾತ್ಮಕರಾಗಿದ್ದಾರೆ., ಹಾಗಾಗಿ ಸುಮಲತಾ ಅವರಿಗೆ ಚುನಾವಣೆಗೆ ಸ್ಪರ್ಧಿಸಲು ಒತ್ತಾಯಿಸಲಾಗುತ್ತಿದೆ” ಎಂದು ಹೇಳಿದ್ದಾರೆ. “ಅಂಬರೀಶ್ ಐದು ವರ್ಷಗಳ ಕಾಲ ಮಂಡ್ಯ ಜಿಲ್ಲೆ ಅಭಿವೃದ್ದಿಯನ್ನು ಕಡೆಗಣಿಸಿದ್ದರು. ಅವರು ಉಸ್ತುವಾರಿ ಸಚಿವರಾಗಿದ್ದಾಗ ಮಂಡ್ಯದಲ್ಲಿಜಿಲ್ಲೆಯ ಅಮೃತ ಮಹೋತ್ಸವ  ಸಹ ನಡೆದಿದ್ದು ಅದರಲ್ಲಿ ಸಹ ಯಾವ ಅಭಿವೃದ್ದಿ ಕಾರ್ಯಕ್ರಮಗಳ ಘೋಷಣೆಯಾಗದೆ ಬದಲಿಗೆ ಕೇವಲ ಸಂಗೀತ, ನೃತ್ಯ ಕಾರ್ಯಕ್ರಮಗಳ ಶೋಕಿ ಇತ್ತು”
“ಅಂಬರೀಶ್ ಹಾಗೂ ನನ್ನ ನಡುವೆ ಉತ್ತಮ ಸ್ನೇಹವಿತ್ತು. ಅವರು ಬೇರೆ ಪಕ್ಷದಲ್ಲಿದ್ದರೂ ನಾವು ಉತ್ತಮ ಗೆಳೆಯರಾಗಿದ್ದೆವು. ಅವರು ನಿಧನರಾದಾಗಲೂ ಮುಖ್ಯಮಂತ್ರಿಯಾಗಿ ನಾನು ಸಲ್ಲಿಸಬೇಕಾಗಿದ್ದ ಗೌರವ ಸಲ್ಲಿಸಿದ್ದೇನೆ. ಆದರೆ ಇದೀಗ ನನ್ನ ಹಾಗೂ ಅವರ ಕುಟುಂಬದ ನಡುವೆ ಬಿರುಕು ಮೂಡಿಸಲು ಕೆಲವರು ಯತ್ನಿಸುತ್ತಿದ್ದಾರೆ” ಮುಖ್ಯಮಂತ್ರಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment