ರಾಜಕೀಯ

ಮಂಡ್ಯದಲ್ಲಿ ಅಂಬಿ ಪುತ್ರನೇ ಕಾಂಗ್ರೆಸ್​ ಅಭ್ಯರ್ಥಿಯಾಗಲಿ: ಮಾಜಿ ಸಚಿವ ಎ.ಮಂಜು

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್​ಗೆ ಹಾಸನ ಕ್ಷೇತ್ರವನ್ನು ನೀಡಿದರೆ, ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್​ಗೆ ಬಿಟ್ಟುಕೊಡಬೇಕು. ರೆಬೆಲ್​ ಸ್ಟಾರ್​ ಅಂಬರೀಷ್​ ಅವರ ಪುತ್ರ ಕಾಂಗ್ರೆಸ್​ ಅಭ್ಯರ್ಥಿಯಾಗಲಿ ಎಂದು ಮಾಜಿ ಸಚಿವ ಎ.ಮಂಜು ತಿಳಿಸಿದ್ದಾರೆ.

ಲೋಕಸಭೆ ಚುನಾವಣೆ ಮೈತ್ರಿ ವಿಚಾರ ಹೈ ಕಮಾಂಡ್​ಗೆ ಬಿಟ್ಟದ್ದು. ಹಾಸನ ಜೆಡಿಎಸ್​ ಪಾಲಾದರೆ, ಮಂಡ್ಯವನ್ನು ಕಾಂಗ್ರೆಸ್​ಗೆ ನೀಡಬೇಕು. ನಮ್ಮ ಪಕ್ಷ ಉಳಿಯೋದು ಬೇಡವಾ ಎಂದಿದ್ದಾರೆ. ಈ ಕುರಿತು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಜತೆ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಾಗುವುದು ಎಂದರು.

About the author

ಕನ್ನಡ ಟುಡೆ

Leave a Comment