ರಾಜ್ಯ ಸುದ್ದಿ

ಮಂಡ್ಯದಲ್ಲಿ 125 ಅಡಿ ಎತ್ತರದ ಕಾವೇರಮ್ಮನ ಪ್ರತಿಮೆ ನಿರ್ಮಿಸಲು ಮುಂದಾದ ರಾಜ್ಯ ಸರಕಾರ

ಬೆಂಗಳೂರು: ಮಂಡ್ಯ ಜಿಲ್ಲೆಯ ಕೃಷ್ಣ ರಾಜ ಸಾಗರ ಜಲಾಶಯದಲ್ಲಿ 125 ಅಡಿ ಎತ್ತರದ ಕಾವೇರಮ್ಮನ ಪ್ರತಿಮೆ ನಿರ್ಮಿಸಲು ಕರ್ನಾಟಕ ಸರಕಾರ ಯೋಜನೆ ರೂಪಿಸಿದೆ. ಸುಮಾರು 1,200 ಕೋಟಿ. ರೂ. ವೆಚ್ಚದಲ್ಲಿ ಕಾವೇರಮ್ಮನ ಪ್ರತಿಮೆ ನಿರ್ಮಾಣ ಮಾಡಲು ಮುಂದಾಗಿದೆ.

ಜತೆಗೆ ಮ್ಯೂಸಿಯಂ ಕಾಂಪ್ಲೆಕ್ಸ್‌, ಕೆಆರ್‌ಎಸ್‌ ಜಲಾಶಯವನ್ನು ಕಣ್ತುಂಬಿಕೊಳ್ಳಬಹುದಾದ 360 ಅಡಿ ಎತ್ತರದ ಎರಡು ಗಾಜಿನ ಗೋಪುರಗಳು, ಒಳಾಂಗಣ ಕ್ರೀಡಾಂಗಣ, ಐತಿಹಾಸಿಕ ಸ್ಮಾರಕಗಳ ಪ್ರತಿಕೃತಿಗಳು ಇತ್ಯಾದಿ ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಈ ಯೋಜನೆ ರೂಪಿಸಲಾಗಿದೆ.

ಈ ಯೋಜನೆಯ ಭಾಗವಾಗಲು ಖಾಸಗಿ ಹೂಡಿಕೆದಾರರಿಗೂ ರಾಜ್ಯ ಸರಕಾರ ಆಹ್ವಾನ ಮಾಡಿದೆ.

ಇತ್ತೀಚೆಗೆ ಗುಜರಾತ್‌ನಲ್ಲಿ ನಿರ್ಮಾಣಗೊಂಡ ಸರ್ದಾರ್‌ ಪಟೇಲ್‌ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ನಂತರ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಉತ್ತರ ಪ್ರದೇಶ ಸರಕಾರ ಘೋಷಿಸಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.

About the author

ಕನ್ನಡ ಟುಡೆ

Leave a Comment