ರಾಜಕೀಯ

ಮಂಡ್ಯ: ಜೆಡಿಎಸ್-ಕಾಂಗ್ರೆಸ್ ಗುದ್ದಾಟದ ಲಾಭ ಪಡೆಯಲು ಬಿಜೆಪಿ ಯತ್ನ; ಭಿನ್ನಮತೀಯರನ್ನು ಭೇಟಿ ಮಾಡಿದ ಬಿಎಸ್ ವೈ

ಮಂಡ್ಯ: ಜೆಡಿಎಸ್ ಭದ್ರಕೋಟೆ ಎಂದೇ ಪರಿಗಣಿತವಾಗಿರುವ ಮಂಡ್ಯ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಟೆಯ ವಿಷಯವಾಗಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಮಂಡ್ಯದಲ್ಲಿ ಬಿಜೆಪಿ ತನ್ನ ಚಾಪು ಮೂಜಿಸಲು ಪ್ರಯತ್ನಿಸುತ್ತಿದೆ. ಮಂಡ್ಯ ಜಿಲ್ಲೆಯ 8 ವಿಧಾನಸಭೆ ಕ್ಷೇತ್ರಗಳನ್ನು ಜೆಡಿಎಸ್ ತನ್ನದಾಗಿಸಿಕೊಂಡಿದೆ. ಕಾಂಗ್ರೆಸ್ ಕಾರ್ಯಕರ್ತರ ವಿರೋಧದ ನಡುವೆಯ ಜೆಡಿಎಸ್ ಗೆ ಸೀಟು ಬಿಟ್ಟುಕೊಡಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ದೇವೇಗೌಡ  ಒಗ್ಗಟ್ಟಾಗಿ ಮಂಡ್ಯದಲ್ಲಿ ಪ್ರಚಾರ ನಡೆಸಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ, ಮಂಡ್ಯದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು, ಜಾತಿ ಸಮೀಕರಣದ ಪ್ರಕಾರ ನವೆಂಬರ್ 3 ರಂದು ನಡೆಯುವ ಉಪಚುನಾವಣೆಯಲ್ಲಿ ಜೆಡಿಎಸ್ ನ ಎಲ್ ಆರ್ ಶಿವರಾಮೇಗೌಡ ಗೆಲ್ಲುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಮಂಡ್ಯ ಲೋಕಸಭೆ ಚುನಾವಣೆಯಲ್ಲಿ ಈ ಹಿಂದೆ ಆರು ಬಾರಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು,1999 ರ ವಿಧಾನಸಭೆ ಚುನಾವಣೆಯಲ್ಲಿ  ಬಹುಮತದಿಂದ ಗೆಲುವು ಸಾಧಿಸಿತ್ತು. ಕಾಂಗ್ರೆಸ್- ಜೆಡಿಎಸ್ ಸ್ಥಳೀಯ ನಾಯಕರ ಬಿನ್ನಾಭಿಪ್ರಾಯ  ಹಾಗೂ ಕುಮಾರಸ್ವಾಮಿ ಅವರು ಮಂಡ್ಯ ಜನತೆ ಮುಂದೆ ಭಾವುಕರಾಗಿ ಮಾತನಾಡುತ್ತಾದ್ದಾರೆ, ಕುಮಾರ ಸ್ವಾಮಿ ಅವರ ಸಾಲಮನ್ನಾ ಬಿಜೆಪಿ ಮಂಡ್ಯದಲ್ಲಿ ಬಿಜೆಪಿಗೆ ವಿರೋಧಿಯಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ನ ಒಳಜಗಳ ಹಾಗೂ ಘರ್ಷಣೆ ಬಿಜೆಪಿಗೆ ಉತ್ತಮ ಅವಕಾಶ ಕಲ್ಪಿಸಿಕೊಟ್ಟಿದೆ, ಕಾಂಗ್ರೆಸ್ ಹಾಗೂ ಜೆಡಿಎಸ್ ಅನ ಭಿನ್ನಮತೀಯರ ಲಾಭ ಪಡೆದುಕೊಳ್ಳಲು ಹವಣಿಸುತ್ತಿದೆ.  ಕಾಂಗ್ರೆಸ್ ನ ಚಲುವರಾಯಸ್ವಾಮಿ, ಹಾಗೂ ಜೆಡಿಎಸ್ ನ ಅಶ್ವಿನ್ ಗೌಡ ಸೇರಿದಂತೆ ಹಲವು ಭಿನ್ನಮತೀಯರನ್ನು ಬಿಜೆಪಿ ಸಂಪರ್ಕಿಸಿದೆ ಎನ್ನಲಾಗುತ್ತಿದೆ. ಸಮ್ಮಿಶ್ರ ಸರ್ಕಾರ ಘೋಷಣೆ ಮಾಡಿರುವ ಸಾಲಮನ್ನಾ ವಿಚಾರ  ವಿಳಂಬವಾಗುತ್ತಿರುವ ಬಗ್ಗೆ ಮಂಡ್ಯ ಜನತೆ ಬೇಸರಗೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment