ಸಿನಿ ಸಮಾಚಾರ ಸುದ್ದಿ

ಮಂಡ್ಯ ಟು ಮುಂಬೈ ಚಿತ್ರಕ್ಕಾಗಿ ಮಾಡಿದ ಸಾಲ ತೀರಿಸಲು ಮನೆ ಮಾರಿದ!

ಮೈಸೂರು: ಮಗನ ಚಿತ್ರದ ಸಾಲ ತೀರಿಸಲು ಮನೆ ಮಾರಿದ ತಾಯಿ ಆ ಹಣವನ್ನು ನಂಬಿಕಸ್ಥ ಮದ್ಯವರ್ತಿ ಕೈಯಲ್ಲಿ ಕೊಟ್ಟು ಮೋಸ ಹೋಗಿರುವ ಘಟನೆ ನಗರದ ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ವಂಚಕನ ವಿರುದ್ಧ ದೂರು ದಾಖಲಾಗಿದೆ.
ಮಂಡ್ಯ ಟು ಮುಂಬೈ ಚಿತ್ರದ ಹೀರೋ ಶೇಖರ್ ಎಂಬಾತ ಚಿತ್ರ ನಿರ್ಮಾಣಕ್ಕಾಗಿ ಸಾಲ ಮಾಡಿದ. ಚಿತ್ರ ಬಿಡುಗಡೆಯಾದರೂ ಯಶಸ್ವಿ ಪ್ರದರ್ಶನ ಕಾಣದ ಹಿನ್ನಲೆಯಲ್ಲಿ ಚಿತ್ರ ನಷ್ಟ ಅನುಭವಿಸಿತ್ತು. ಈ ಹಿನ್ನಲೆಯಲ್ಲಿ ನಟ ಶೇಖರ್‌‌ನ ತಾಯಿ ಮಂಜುಳಾ ಮನೆ ಮಾರಿ 13 ಲಕ್ಷವನ್ನು ಮದ್ಯವರ್ತಿ ದಿನೇಶ್ ಎಂಬುವನಿಗೆ ಇಟ್ಟುಕೊಳ್ಳಲು ಹೇಳಿದಳು. ಆದರೆ ಆತ ಆ ಹಣವನ್ನ ವಾಪಸ್‌ ನೀಡದೆ ಹಣವನ್ನು ದುರುಪಯೋಗಪಡಿಸಿಕೊಂಡು ತಲೆ ಮರೆಸಿಕೊಂಡಿದ್ದಾನೆ.

ಈ ಬಗ್ಗೆ ನಟನ ತಾಯಿ ಮಂಜುಳಾ ಕುವೆಂಪುನಗರ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದು ಈ ಘಟನೆ ಸಂಪೂರ್ಣ ಅಸ್ಪಷ್ಟವಾಗಿದ್ದು ಪೊಲೀಸ್ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.

About the author

ಕನ್ನಡ ಟುಡೆ

Leave a Comment