ಸಿನಿ ಸಮಾಚಾರ

ಮಂಡ್ಯ ಲೋಕಸಭೆ ಕ್ಷೇತ್ರ : ಚುನಾವಣಾ ಅಖಾಡಕ್ಕಿಳಿದ ಅಭಿಷೇಕ್; ಅಮ್ಮನ ಪರ ಜ್ಯೂನಿಯರ್ ರೆಬೆಲ್ ಪ್ರಚಾರ

ಮಂಡ್ಯ: ನಟಿ ಸುಮಲತಾ ಅಂಬರೀಷ್ ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ತಮ್ಮ ಪ್ರವಾಸ ಮುಂದುವರಿಸಿದ್ದಾರೆ. ಜೊತೆಗೆ ಪುತ್ರ ಅಭಿಷೇಕ್ ಗೌಡ ಕೂಡ ತಾಯಿಯ ಪರವಾಗಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇದರ ಜೊತೆಗೆ ನಿಖಿಲ್ ಕುಮಾರ್ ಕೂಡ ಮಂಡ್ಯದಲ್ಲಿ ಪ್ರಚಾರ ಕಾರ್ಯ ಮುಂದುವರಿಸಿದ್ದಾರೆ, ಕಳೆದ ಒಂದು ವಾರದಿಂದ ಚಿತ್ರೀಕರಣಕ್ಕೆಂದು ವಿದೇಶಕ್ಕೆ ತೆರಳಿದ್ದ ಅಭಿಷೇಕ್‌, ಬುಧವಾರ ತಾಯಿ ಸುಮಲತಾ ಅವರ ಪ್ರಚಾರಕ್ಕೆ ಸಾಥ್‌ ನೀಡಿದರು. ಇದೇ ವೇಳೆ ಮಳವಳ್ಳಿ ತಾಲೂಕಿನ ಹಾಡ್ಲಿ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿಷೇಕ್‌ ತಮ್ಮ ತಂದೆ ಅಂಬರೀಷ್‌ ಡೈಲಾಗ್‌ ಹೊಡೆಯುತ್ತಿದ್ದಂತೆ ನೆರೆದಿದ್ದ ಕಾರ್ಯಕರ್ತರು, ಅಭಿಮಾನಿಗಳ ಶಿಳ್ಳೆ-ಚಪ್ಪಾಳೆ ಮುಗಿಲು ಮುಟ್ಟಿತು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್‌, ಮುಂದಿಟ್ಟ ಹೆಜ್ಜೆಯನ್ನು ಯಾವುದೇ ಕಾರಣಕ್ಕೂ ಹಿಂದೆ ಇಡಬೇಡಿ ಎಂಬ ಕೂಗು ಎಲ್ಲೆಡೆ ಎದ್ದಿದೆ ಎಂದರು. ಚುನಾವಣಾ ಪ್ರಚಾರ ನನಗೇನು ಹೊಸದಲ್ಲ. ಅಪ್ಪನ ಜೊತೆ ಪ್ರಚಾರ ಮಾಡುತ್ತಿದ್ದೆ. ಆದರೆ, ಅನುಭವ ಕಡಮೆಯಿದೆ ಎಂದು ಹೇಳಿದ್ದಾರೆ, ಮಳವಳ್ಳಿ ಹುಚ್ಚೇಗೌಡರ ಸೊಸೆ. ಜೊತೆ ಅವರ ಮೊಮ್ಮಗ ನಾನೂ ಕೂಡ ಬಂದಿದ್ದೇನೆ. ನಮ್ಮ ಅಪ್ಪನಿಗೆ ತೋರಿಸಿದ ಪ್ರೀತಿ, ವಿಶ್ವಾಸವನ್ನು ಅಮ್ಮ ಸುಮಲತಾ ಮೇಲೂ ತೋರಿಸಿ, ಆಶೀರ್ವದಿಸಿ ಎಂದು ಮನವಿ ಮಾಡಿದರು. ಪ್ರಚಾರಕ್ಕೆ ಚಿತ್ರರಂಗದವರು ಬಂದೇ ಬರುತ್ತಾರೆ. ಕಾದು ನೋಡಿ ಎಂದರು. ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದು ನಿಮಗೆ ಕಾಣುತ್ತಿದೆ. ಹಿಂದೆ ಹೆಜ್ಜೆ ಇಡಬೇಡಿ, ಮುಂದೆ ಇಡಿ‌ ಎಂದು ಎಲ್ಲರೂ ಹೇಳುತ್ತಿದ್ದಾರೆ ಎಂದು ಅಭಿಷೇಕ್​ ತಿಳಿಸಿದ್ದಾರೆ. ಹೋದಲೆಲ್ಲಾ ಜನರು ಉತ್ತಮವಾಗಿ ಪ್ರತಿಕ್ರಿಯಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ. ನಮಗೆ ರಾಜಕೀಯ ಗೊತ್ತಿಲ್ಲ. ನಾವು ಏನೇ ತೀರ್ಮಾನ ಕೈಗೊಂಡರು ಅದನ್ನು ಜನರ ಮುಂದೆ ಇಟ್ಟು ತೀರ್ಮಾನ ಮಾಡುತ್ತೇವೆ. ನಮ್ಮ ತಂದೆ ಮತ್ತು ತಾಯಿಗೋಸ್ಕರ ಇಲ್ಲಿಗೆ ಬಂದಿದ್ದೇನೆ. ಇವರೆಲ್ಲ ನಮ್ಮ ಕೈ ಹಿಡಿಯುತ್ತಾರೆ ಎಂದು ತಿಳಿದುಕೊಂಡಿದ್ದೇನೆ ಎಂದು ಹೇಳಿದ್ದಾರೆ. ಇನ್ನೂ ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಕೂಡ ತಮ್ಮ ಪ್ರಚಾರ ಮುಂದುವರಿಸಿದ್ದಾರೆ, ಅಭಿಷೇಕ್ ಮತ್ತು ನಿಖಿಲ್ ಇಬ್ಬರು ಸದ್ಯ ಸಿನಿಮಾ ರಂಗದಲ್ಲಿ ಬ್ಯುಸಿ ನಟರಾಗಿಗ್ದಾರೆ, ಇಬ್ಬರು ಉತ್ತಮ ಗೆಳೆಯರು ಕೂಡ, ಪಾಲಿಟಿಕ್ಸ್ ಇಬ್ಬರ ಸ್ನೇಹಕ್ಕೆ ಎಲ್ಲೂ ತೊಂದರೆ ತಂದಿಲ್ಲ ಎಂದು ನಿಖಿಲ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment