ರಾಜಕೀಯ

ಮಂಡ್ಯ ಲೋಕಸಭೆ ಚುನಾವಣೆ: ಪಕ್ಷೇತರರಾಗಿ ಕಣಕ್ಕಿಳಿಯಲು ಸುಮಲತಾ ಅಂಬರೀಶ್ ತಯಾರಿ

ಮಂಡ್ಯ: ಮಂಡ್ಯ ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ತಪ್ಪಿದರೂ ಸುಮಲತಾ ಅಂಬರೀಶ್ ಚುನಾವಣಾ ತಯಾರಿ ಆರಂಭಿಸಿದ್ದಾರೆ. ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸ್ಪಷ್ಟ ಸಂದೇಶವನ್ನು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ರವಾನಿಸಿರುವ ಸುಮಲತಾ ಅಂಬರೀಶ್, ಚುನಾವಣಾ ಕೆಲಸಗಳಿಗೆ ಹಾಗೂ ಪ್ರಚಾರಕ್ಕಾಗಿ ಫೋಟೋಗಳನ್ನು ಬಳಸಲು ಫೋಟೋ ಶೂಟ್ ನಡೆಸಿದ್ದಾರೆ. ಸಕ್ಕರೆ ನಾಡಿನ ಚುನಾವಣಾ ಅಖಾಡಕ್ಕೆ ಧುಮುಕಲು ಸುಮಲತಾ ಅವರು ಭರ್ಜರಿ ಸಿದ್ದತೆ ನಡೆಸಿದ್ದಾರೆ. ನಾಮಪತ್ರ ಸಲ್ಲಿಕೆ ಸೇರಿದಂತೆ ಕಟೌಟ್, ಬಂಟಿಗ್ಸ್, ಬ್ಯಾನರ್ಸ್ ಮತ್ತು ವೇದಿಕೆಗಳಲ್ಲಿ ಬಳಸಿಕೊಳ್ಳಲು ಸುಮಲತಾ ಫೋಟೋಗಳನ್ನು ತೆಗೆಸಿಕೊಂಡಿದ್ದಾರೆ. ವೃತ್ತಿಪರ ಪೋಟೋಗ್ರಾಫರ್ ಸುಮಲತಾ ಅವರ ವಿವಿಧ ಭಂಗಿಗಳಲ್ಲಿ, ವೈವಿಧ್ಯಮಯ ವಿನ್ಯಾಸಗಳ ಸೀರೆಗಳನ್ನುಟ್ಟು, ಅಪ್ಪಟ ಕನ್ನಡ ನಾಡಿದ ಹೆಣ್ಣುಮಗಳಂತೆ ಪೋಟೋಗಳನ್ನು ತೆಗೆಸಿಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಸುಮಲತಾ ಅವರನ್ನು ಬಿಜೆಪಿಯಿಂದ ಕಣಕ್ಕಿಳಿಸುವ ಪ್ರಯತ್ನ ವಿಫಲಗೊಂಡಿತ್ತು. ಕಾಂಗ್ರೆಸ್ ಟಿಕೆಟ್ ನೀಡದೆ ಕೈ ಚೆಲ್ಲಿದ ಹಿನ್ನಲೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿದು ಬಿಜೆಪಿ ಬೆಂಬಲದೊಂದಿಗೆ ಸ್ಪರ್ಧಿಸಿ ಜೆಡಿಎಸ್ ಗೆ ತಿರುಗೇಟು ನೀಡಲು ಸುಮಲತಾ ತಂತ್ರ ರೂಪಿಸಿದ್ದಾರೆ.

About the author

ಕನ್ನಡ ಟುಡೆ

Leave a Comment