ರಾಜ್ಯ ಸುದ್ದಿ

ಮಕ್ಕಳ ಚಲನಚಿತ್ರೋತ್ಸವ: ಸಿನಿಮಾ ನೋಡಲು ರಾಜ್ಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಬ್ರೇಕ್

ಬೆಂಗಳೂರು: ಅಂತರಾಷ್ಚ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ರಾಜ್ಯದ 23 ಜಿಲ್ಲೆಗಳ ಸರ್ಕಾರಿ ಶಾಲೆ ಮಕ್ಕಳಿಗೆ ಸಿನಿಮಾ ನೋಡುವ ಸಲುವಾಗಿ ಬುಧವಾರ ರಜೆ ನೀಡಲಾಗಿತ್ತು. ಅಂತರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ಅಂಗವಾಗಿ ನವೆಂಬರ್ 14 ರಿಂದ ಆರಂಭವಾಗಿರುವ ಉತ್ಸವ, ನವೆಂಬರ್ 23ರ ವರೆಗೂ ನಡೆಯಲಿದೆ,.ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಈ ಒಂದು ಯೋಜನೆ ಕೈಗೊಂಡಿದೆ. ಈ ಸಿನಿಮೋತ್ಸವ ಅಂಗವಾಗಿ ಹಲವು ಚಿತ್ರಗದಳನ್ನು ಪ್ರದರ್ಶಿಸಲಾಗುವುದು. ಸಿನಿಮೋತ್ಸವ ಮುಗಿಯುವವರೆಗೂ ರಾಜ್ಯದ ಹಲವು ಜಿಲ್ಲೆಗಳ ಶಾಲೆಗಳಲ್ಲಿ ಚಿತ್ರ ಪ್ರದರ್ಶನ ನಡೆಯಲಿದೆ. ಆಯ್ದ ಸರ್ಕಾರಿ ಶಾಲೆಗಳಲ್ಲಿ ಸ್ಯಾಟ್ ಲೈಟ್ ಮೂಲಕ ಸಿನಿಮಾ ಪ್ರದರ್ಶನ ಮಾಡಲಾಗುವುದು, ಮಕ್ಕಳಿಗೆ 20 ಭಾಷೆಗಳ ಸಿನಿಮಾಗಳನ್ನ ಪ್ರದರ್ಶಿಸಲಾಗುವುದು, ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸುವ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುವ ಅವಕಾಶ ಸಿಗುವುದಿಲ್ಲ, ಹೀಗಾಗಿ ಈ ಸಿನಿಮೋತ್ಸವ ಆಯೋಜಿಸಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ತಿಳಿಸಿದೆ.

About the author

ಕನ್ನಡ ಟುಡೆ

Leave a Comment