ಅಂಕಣಗಳು ಜೀವನ ಶೈಲಿ

ಮಕ್ಕಳ ಶಿಸ್ತಿಗೆ ಹಿರಿಯರು ಬೇಕು ಮನೆಗೆ

ವಯಸ್ಸಾದಂತೆ ಮಕ್ಕಳು ತಮ್ಮ ಹಿರಿಯರನ್ನು ವೃದ್ದಾಶ್ರಮಕ್ಕೆ ಸೇರಿಸಿಬಿಡುತ್ತಾರೆ.

ಕೆಲಸಕ್ಕೆ ಹೋಗುವ ದಂಪತಿಗಳಾದರೆ,ಬೆಳಿಗ್ಗೆ ಹೋಗಿ ಸಾಯಂಕಾಲ ಮನೆಗೆ ಬರುತ್ತಾರೆ.

ಅವರ ಮಕ್ಕಳು ಮನೆಗೆ ಬಂದು ತಾವೇ ಮನೇಲಿ ಏನಾದರೂ ಇದ್ದರೆ ತಿಂದು ಮತ್ತೆ ಮನೆಪಾಠಕ್ಕೆ ಹೋಗಿಬಿಡುತ್ತಾರೆ.

ಒಂದು ತರದಲ್ಲಿ ಯಂತ್ರ ದಂತೆ . ರಾತ್ರಿ ಬಂದು ಮತ್ತೆ ಓದು ನಂತರ ಮಲಗು.

ಒಂದೊಂದು ಸಾರಿ ವಯಸ್ಸಿನ ಗಂಡು / ಹೆಣ್ಣು ಮಕ್ಕಳು ತಾಯಿ ತಂದೆ ಇಲ್ಲದ ಸಮಯದಲ್ಲಿ ಏನು ಮಾಡುತ್ತಾರೆ ಯಾವಾಗ ತಪ್ಪು ದಾರಿ ಹಿಡಿದಿರುತ್ತಾರೆ ಎಂದು ಅವರ ಹೆತ್ತವರಿಗೆ ತಿಳಿಯುವುದೇ ಇಲ್ಲ .

ಸಮಯ ಮೀರಿದಾಗ ನೊಂದು ಕೊಳ್ಳುತ್ತಾರೆ.

ಮನೆಗೆ ದೊಡ್ಡ ವರು ಅಂತ ಇದ್ದರೆ ಚಿಕ್ಕ ವಯಸ್ಸಿನಲ್ಲಿ ನೀತಿ ಕಥೆ ಹೇಳುವುದು ಹಾಗೂ ವಯಸ್ಸಿಗೆ ಬಂದ ಮಕ್ಕಳಿಗೆ ಬುದ್ಧಿವಾದ ಹೇಳುವುದು ಮಾಡುತ್ತಾರೆ.

ಮಕ್ಕಳಿಗೂ ಮನೆಯಲ್ಲಿ ಅಜ್ಜ ಅಜ್ಜಿ ಇದ್ದರೆ ತಪ್ಪು ದಾರಿ ಹಿಡಿಯಲು ಹಿಂಜರಿಯುತ್ತಾರೆ .

ಒಂಟಿತನ ಮಕ್ಕಳನ್ನು ಎಂದೂ ಕಾಡದಂತೆ ಅವರು ಕಾಪಾಡುತ್ತಾರೆ. ತಂದೆ ತಾಯಿ ಎಷ್ಟು ಪ್ರೀತಿ ಕೊಟ್ಟರೂ. ಅಜ್ಜ ಅಜ್ಜಿಯ ಪ್ರೀತಿಯೇ ಬಲು ಮಧುರ.

ತಂದೆ ತಾಯಿ ಮಕ್ಕಳು ತಪ್ಪು ಮಾಡಿದಾಗ ಕಿರುಚುತ್ತಾರೆ ಬಯ್ಯುತ್ತಾರೆ ಒಂದೊಂದು ಸಾರಿ ಶಿಕ್ಷಿಸುತ್ತಾರೆ ಆದರೂ ಮಕ್ಕಳು ಸರಿ ದಾರಿಗೆ ಬಂದೇ ಬರುತ್ತಾರೆ ಎಂಬ ನಂಬಿಕೆ ಇಲ್ಲ.

ಆದರೆ ಮನೆಯ ಹಿರಿಯರು ಇದು ಯಾವುದನ್ನು ಮಾಡದೆ ಅವರ ಅನುಭವ ತಾಳ್ಮೆ ಯಿಂದ ಮಕ್ಕಳ ನ್ನು ಮನ ಮುಟ್ಟುವ ಮಾತಿನಿಂದಲೇ ಸರಿ ದಾರಿಗೆ ತಂದ ಉದಾಹರಣೆಗಳು ಬೇಕಾದಷ್ಟು ಸಿಗುತ್ತದೆ.

ಅಷ್ಟೇ ಅಲ್ಲದೆ ಅಕ್ಕ ಪಕ್ಕದ ಮನೆಗಳಲಿ ಆಗಲಿ ಹೊರ ಹೋದಾಗಲೇ ಆಗಲಿ ಹಿರಿಯರ ಜೊತೆ ಮಕ್ಕಳು ಹೋದಾಗ ಯಾರೂ ಹೊರಗಿನವರು ಚೇಡಿಸುವ ಧೈರ್ಯ ಮಾಡುವುದಿಲ್ಲ.

ಹಿರಿಯರಿದ್ದರೆ ಮನೆಯಲ್ಲಿ ಅದರ ಕಳೆಯೇ ಬೇರೆ . ಹಬ್ಬ ಹರಿದಿನ ಅವರು ನಮಗೆ ತಮ್ಮ ಹಿಂದಿನ ನೆನಪುಗಳನ್ನು
ಹೇಳುತ್ತಾ, ನಮಗೂ ಹಬ್ಬ ದ ರೀತಿ ನೀತಿ ಹೇಳಿ ಕೊಡುತ್ತಾರೆ. ನಮ್ಮಂತೆ ನಮ್ಮ ಮಕ್ಕಳು ಅದೇ ರೀತಿ ಪಾಲಿಸುತ್ತಾರೆ.

ಒಟ್ಟಿನಲ್ಲಿ ಹಿರಿಯರು ಮನೆಯಲ್ಲಿ ನಮ್ಮ ಜೊತೆಯಲ್ಲಿ ಇರಬೇಕು ಆಗಲೇ ಮನೆಯ ರೀತಿ ನೀತಿ ಭಯ ಭಕ್ತಿ ಎಲ್ಲವೂ ಇರುತ್ತದೆ.

ಆದ್ದರಿಂದ ಹಿರಿಯರನ್ನು ಹೊರೆ ಎಂದು ಭಾವಿಸಬೇಡಿ ದಯವಿಟ್ಟು ಅವರಿದ್ದರೇನೆ ನಮ್ಮ ಜೀವನಕ್ಕೂ ಸಾರ್ಥಕತೆ ಸಿಗುವುದು.
                                                                                                                                                     -ಸುರಭಿ ಲತಾ

About the author

ಕನ್ನಡ ಟುಡೆ

Leave a Comment