ಸುದ್ದಿ

ಮಗಳಿಗೆ ವರನು ಸಿಕ್ಕಿಲ್ಲ ಎಂದು ಮನನೊಂದು ತಾಯಿ ಮಗಳು ಆತ್ಮಹತ್ಯೆ

ಬೆಂಗಳೂರು: ಮಗಳಿಗೆ ಒಳ್ಳೆಯ ವರನ್ನು ನೋಡುತ್ತಿದ್ದು ಅಂತಹ ಯಾವುದೇ ವರ ಸಿಕ್ಕಿಲ್ಲದ ಕಾರಣ ಮನನೊಂದ ತಾಯಿ ತನ್ನ ಮಗಳೊಡನೆ ಸೇರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ರಾಜಾಜಿನಗರದ ಪ್ರಕಾಶ್ ನಗರದಲ್ಲಿ ನಡೆದಿದೆ.

ತಾಯಿ ಸಾವಿತ್ರಮ್ಮ ಮಗಳು ಮಂಜುಳಾ ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು. ಮೂರು ದಿನಗಳ ಹಿಂದೆಯೇ ಇವರು ಆತ್ಮಹತ್ಯೆ ಮಾಡಿಕೊಂಡಿದ್ದು ಅಮ್ಮ, ಮಗಳು ಮನೆಯ ಹೊರಗೆ ಕಾಣಿಸಿಕೊಂಡಿರದ ಹಿನ್ನೆಲೆಯಲ್ಲಿ ಪಕ್ಕದ ಮನೆಯವರು ಪೋಲೀಸರಿಗೆ ಮಾಹಿತಿ ನೀಡಿದ್ದ ನಂತರ ಘಟನೆ ಬೆಳಕಿಗೆ ಬಂದಿದೆ.ಮೃತರು ಯಾವುದೇ ಡೆತ್ ನೋಟ್ ಬರೆದಿಟ್ಟಿಲ್ಲ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

 

About the author

ಕನ್ನಡ ಟುಡೆ

Leave a Comment