ಕ್ರೈಂ

ಮಗಳೊಡನೆ ಅನುಚಿತ ವರ್ತನೆ ಪ್ರೇಯಸಿಯಿಂದಲೇ ಪ್ರಿಯಕರನ ಹತ್ಯೆ

ಬೆಂಗಳೂರು: ಗಾರ್ಮೆಂಟ್ ಕಾರ್ಖಾನೆ ಉದ್ಯೋಗಿಯೊಬ್ಬ ತನ್ನ ಪ್ರಿಯತಮೆಯಿಂದಲೇ ಹತ್ಯೆಯಾದ ಘಟನೆ ಬೆಂಗಳೂರು ಪೀಣ್ಯ ಸಮೀಪದ ಚಿಕ್ಕಬಿದರಕಲ್ಲಿನಲ್ಲಿ ನಡೆದಿದೆ. ರೂಪಾ (31) ಎಂಬಕೆಯ ಚಿಕ್ಕ ಮಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ತನ್ನ ಪ್ರಿಯಕರ  ರಘು (35) ವನ್ನು ಕೊಂದು ಹಾಕಿದ್ದಾಳೆ. ಬುಧವಾರ ಬೆಳಗಿನ ಜಾವ ಈ ಘಟನೆ ಸಂಭವಿಸಿದ್ದು ಮನೆಯಲ್ಲಿನ ಗಲಾಟೆಯಿಂದ ಎಚ್ಚರಗೊಂಡ ನೆರೆಯವರು ಪ್ರಕರಣ ಸಂಬಂಧ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ.

ರಘು ತಮಿಳುನಾಡು ಮೂಲದವರಾಗಿದ್ದು ಪತ್ನಿ ಹಾಗೂ ಇಬ್ಬರು ಮಕ್ಕಳ ಜತೆ ದಾಸರಹಳ್ಳಿಯಲ್ಲಿ ವಾಸವಾಗಿದ್ದರು. ತಿಪಟೂರಿನ ರೂಪಾ ಸಹ ವಿವಾಹಿತೆಯಾಗಿದ್ದು ಪತಿ–ಇಬ್ಬರು ಹೆಣ್ಣು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ಇಬ್ಬರೂ ಒಂದೇ ಗಾರ್ಮೆಂಟ್ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದು ಆರು ತಿಂಗಳ ಹಿಂದೆ ರಘು ರೂಪಾಳನ್ನು ಪರಿಚಯ ಮಾಡಿಕೊಂಡಿದ್ದ. ಅದಾಗಿ ಅವರ ಸ್ನೇಹ ಅನೈತಿಕ ಸಂಬಂಧಕ್ಕೆ ಕಾರಣವಾಗಿತ್ತು.

ಬುಧವಾರ ಸಂಜೆ ರೂಪಾಳ ಪತಿ ತಿಪಟೂರು ಜಾತ್ರೆಗೆ ತೆರಳಿದ್ದು ಅಂದು ರಾತ್ರಿ ಮದ್ಯ ಸೇವಿಸಿದ್ದ ಸ್ಥಿತಿಯಲ್ಲೇ ರಘು ಆಕೆಯ ಮನೆಗೆ ಬಂದಿದ್ದಾನೆ.  ಆಗ ರೂಪಾಳ ಹಿರಿ ಮಗಳ ಮೇಲೆ ಕಣ್ಣಿಟ್ಟ ರಘು ತಾನು ಆಕೆಯೊಡನೆ ಸಹ ದೈಹಿಕ ಸಂಪರ್ಕ ಹೊಂದಬೇಕೆಂದು ಹಠ ಹಿಡಿದಿದ್ದ ಇದರಿಂದ ಕೋಪಿತಗೊಂಡ ರೂಪಾ ಆತನನ್ನು ಕೊಲ್ಲಲು ನಿರ್ಧರಿಸಿದ್ದಾಳೆ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.

ಮೊದಲಿಗೆ ಊಟಕ್ಕೆ ಕರೆದ ರೂಪಾ ರಘುವಿಗೆ ಗೊತ್ತಾಗದಂತೆ ಊಟದಲ್ಲಿ ನಿದ್ರೆ ಮಾತ್ರೆ ಬೆರೆಸಿ ಕೊಟ್ಟಿದ್ದಾಳೆ. ಹಾಗೆ ಊಟ ಮಾಡಿದ ಬಳಿಕ ನಿದ್ರೆಗೆ ಜಾರಿದ್ದ ರಘುವಿನ ಹೊಟ್ಟೆಗೆ ಚಾಕುವಿನಿಂದ ಚುಚ್ಚಿ ಹಲ್ಲೆ ನಡೆಸಿದ್ದಾಳೆ. ಅಲ್ಲದೆ ಈಳ್ಳಿಗೆಮಣೆಯಿಂದ ಕುತ್ತಿಗೆಗೆ ಬಲವಾಗಿ ಹೊಡೆದು ಅವನನ್ನು ಹತ್ಯೆ ಮಾಡಿದ್ದಾಳೆ ಎಂದು ಪೋಲೀಸರು ಹೇಳಿದರು.

“ತನ್ನ ಮಗಳ ಮೇಲೆ ಕಾಮದ ಕಣ್ಣಿಟ್ಟಿದ್ದ ಆತನಾನಿಲ್ಲದ ಸಂದರ್ಭದಲ್ಲಿ ಆಕೆ ಜತೆ ಅನುಚಿತವಾಗಿ ವರ್ತಿಸುತ್ತಿದ್ದ. ನಾನು ಈ ಸಂಬಂಧ ಆತನಿಗೆ ಎಚ್ಚರಿಸಿದ್ದೆ, ಮನೆಗೆ ಬರದಂತೆ ಹೇಳಿದರೂ ಬುಧವಾರ ರಾತ್ರಿ ಕುಡಿದು ಬಂದು ಗಲಾಟೆ ಮಾಡಿದ. ಅದಕ್ಕಾಗಿ ಅವನನ್ನು ಕೊಲೆ ಮಾಡಿದೆ” ಆರೋಪಿ ರೂಪಾ ತನ್ನ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾಳೆ. ಪ್ರಸ್ತುತ ರೂಪಾಳನ್ನು ಬಂಧಿಸಿರುವ ಪೋಲೀಸರು ಪ್ರಕರಣದ ಕುರಿತ ತನಿಖೆ ಮುಂದುವರಿಸಿದ್ದಾರೆ.

 

 

 

About the author

ಕನ್ನಡ ಟುಡೆ

Leave a Comment