ರಾಷ್ಟ್ರ ಸುದ್ದಿ

ಮಗಳ ಮದುವೆಗೆ ಮೊದಲು ಅಂಬಾನಿಯಿಂದ ಬಡವರಿಗೆ ಅನ್ನ ಸೇವೆ

ಹೊಸದಿಲ್ಲಿ: ಮಗಳ ಮದುವೆಗೆ ಮೊದಲು ಉದ್ಯಮಿ ಮುಕೇಶ್‌ ಅಂಬಾನಿ ಮತ್ತು ಕುಟುಂಬ ಶನಿವಾರ ವಿಶೇಷ ಅನ್ನ ಸೇವೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ. ಮೂರು ದಿನಗಳ ಈ ವಿಶೇಷ ಔತಣಕೂಟದಲ್ಲಿ 5,100 ಮಂದಿಗೆ ಮೂರು ಹೊತ್ತಿನ ಊಟ ನೀಡುವ ಗುರಿ ಹೊಂದಿದೆ. ಇವರಲ್ಲಿ ಹೆಚ್ಚಿನವರು ವಿಶೇಷ ಚೇತನರು.

ಉದಯಪುರದಲ್ಲಿ ಇಶಾ ಅಂಬಾನಿ ಮತ್ತು ಅನಂದ್‌ ಪಿರಿಮಾಲ್‌ ಅವರ ವಿವಾಹ ಪೂರ್ವ ಕಾರ್ಯಕ್ರಮಗಳು ಡಿ.8 ಮತ್ತು 9 ರಂದು ನಡೆಯುತ್ತಿವೆ. ಇದೇ ವೇಳೆ ಬಡವರಿಗೆ ಊಟ ಹಾಕಿಸುವ ಮೂಲಕ ಹೃದಯವಂತಿಕೆ ಮೆರೆದಿದ್ದಾರೆ. ಉದಯಪುರದ ನಾರಾಯಣ ಸೇವಾ ಸಂಸ್ಥಾನದಲ್ಲಿ ಆರಂಭಗೊಂಡ 3 ದಿನಗಳ ಅನ್ನ ಸೇವೆ ಕಾರ್ಯಕ್ರಮದಲ್ಲಿ ಖುದ್ದಾಗಿ ಮುಕೇಶ್‌ ಮತ್ತು ಪತ್ನಿ ನೀತಾ, ಅಳಿಯ ಆನಂದ್‌ ಪೋಷಕರು ಹಾಜರಿದ್ದು, ಊಟ ಬಡಿಸಿದ್ದಾರೆ.

About the author

ಕನ್ನಡ ಟುಡೆ

Leave a Comment