ಸಿನಿ ಸಮಾಚಾರ

ಮಣಿಕರ್ಣಿಕಾ ಗಾಗಿ ಲಕ್ಷ್ಮಿಬಾಯಿಯಾದ ಕಂಗನಾ ರಣಾವತ್

ಮುಂಬೈ: ಬಾಲಿವುಡ್ ಫೇವರಿಟ್ ಕಂಗನಾ ರಣಾವತ್ ಅಭಿನಯದ “ಮಣಿಕರ್ಣಿಕಾ” ಟ್ರೇಲರ್ ಹೊರಬಂದಿದೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹಿನ್ನೆಲೆ ದನಿಯೊಡನೆ ತೆರೆದುಕೊಳ್ಳುವ ಈ ಟೀಸರ್ ನಲ್ಲಿ ಭಾರತದಲ್ಲಿ ವ್ಯಾಪಾರಕ್ಕಾಗಿ ಆಗಮಿಸಿದ ಈಸ್ಟ್ ಇಂಡಿಯಾ ಕಂಪನಿ ದೇಶದ ಜನರನ್ನು ಹೇಗೆ ತನ್ನ ದಾಸ್ಯಕ್ಕಿತ್ಟುಕೊಂಡಿತು ಎನ್ನುವುದನ್ನು ತೋರಿಸುತ್ತದೆ. ಈ ಟ್ರೇಲರ್ ನಲ್ಲಿ ಮಣಿಕರ್ಣಿಕಾ ಅಥವಾ ರಾಣಿ ಲಕ್ಷ್ಮಿಬಾಯಿಯಾಗಿ ಕಾಣಿಸಿಕೊಳ್ಳುತ್ತಿರುವ ಕಂಗನಾ ತಮ್ಮ ಕೈನಲ್ಲಿ ಕತ್ತಿ ಹಿಡಿದು ಬ್ರಿಟೀಷ್ ಧ್ವಜವನ್ನೇ ಹೆದರಿಸುತಿರುವ ದಿಟ್ಟ ಮಹಿಳೆಯಾಗಿ ಕಾಣಿಸುತ್ತಾರೆ. ಅಲ್ಲದೆ ಕಂಗಾನಾ ಕತ್ತಿ ಹಿಡಿದು ಕುರ್=ದುರೆ ಸವಾರಿ ನಡೆಸುವ ಕೆಲ ದೃಶ್ಯಗಳನ್ನು ಸಹ ಇದೇ ಟ್ರೇಲರ್ ನಲ್ಲಿ ನಾವು ನೋಡುತೇವೆ. ಝಾನ್ಸಿ ರಾಣಿಯ ಭವ್ಯ ರೂಪವು ಈ ಕ್ಷಣದಲ್ಲಿ ನಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ. ಆಕೆಯ ಹೋರಾಟ, ಆಕೆ ಸಿಂಹಾಸನದ ಮೇಲೆ ಕುಳಿತಿರುವ ಭಂಗಿ ಎಲ್ಲಾ ಅದ್ಭುತವಾಗಿದೆ.
ಜಿಶು ಸೇನ್ ಗುಪ್ತ, ಸುರೇಶ್ ಒಬೆರಾಯ್, ಡ್ಯಾನಿ ಡೆಂಜೋಂಗಪ್ಪ, ಅತುಲ್ ಕುಲಕರ್ಣಿ, ಝೀಶನ್ ಆಯುಬ್ ಮತ್ತು ಅಂಕಿತ ಲೋಖಂಡೆ ಮುಂತಾದವರು ಈ ಚಿತ್ರದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಝೀ ಸ್ಟುಡಿಯೋಸ್ ಮತ್ತು ಕಮಲ್ ಜೈನ್ ಜಂಟಿ ನಿರ್ಮಾಣದ  “ಮಣಿಕಾರ್ಣಿಕಾ: ದಿ ಕ್ವೀನ್ ಆಫ್ ಝಾನ್ಸಿ” ಚಿತ್ರಕ್ಕೆ ರಾಧಾಕೃಷ್ಣ ಜಗರ್ಲಮುಡಿ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರವು ಮುಂದಿನ ವರ್ಷ ಜನವರಿ 25ಕ್ಕೆ ವಿಶ್ವದಾದ್ಯಂತ ತೆರೆ ಕಾಣಲಿದೆ.

About the author

ಕನ್ನಡ ಟುಡೆ

Leave a Comment