ರಾಷ್ಟ್ರ ಸುದ್ದಿ

ಮತದಾರರ ಗುರುತು ಚೀಟಿಗೆ ಆಧಾರ್ ಜೊಡಣೆ: ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಕಾರ

ನವದೆಹಲಿ: ಮತದಾರರ ಗುರುತಿನ ಚೀಟಿ (ವೋಟರ್ ಐಡಿ) ಯನ್ನು  ಆಧಾರ್ ಗೆ ಜೋಡಿಸುವ ಸಂಬಂಧ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಆಧಾರ್-ವೋಟರ್ ಐಡಿ ಜೋಡನೆ ಕುರಿತು ನಿರ್ದೇಶನ ನೀಡಬೇಕೆಂದು ಸಲ್ಲಿಕೆಯಾಗಿದ್ದ ಅರ್ಜಿಗಳ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದ್ದು ಈ ಕುರಿತಂತೆ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಅವರನ್ನೊಳಗೊಂಡ ಪೀಠ ಅರ್ಜಿದಾರ ವಕೀಲ ಅಶ್ವಿನಿ ಉಪಾದ್ಯಾಯ ಅವರಿಗೆ ಈ ಸೂಚನೆ ನಿಡಿದೆ. ನೀವು ಇದರ ಕುರಿತು ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಬಹುದು, ಅದು ಸೂಕ್ತ ನಿರ್ದೇಶನ ನಿಡಲಿದೆ”  ಕೋರ್ಟ್ ಹೇಳಿದೆ. ಆಧಾರ್ ಜಾರಿಗೆ ಬಂದಾಗಿನಿಂದಲೂ ಗೊಂದಲಗಳಿಗೆ ಕಾರಣವಾಗಿದ್ದು ಸರ್ಕಾರಿ ಯೋಜನೆಗಳು, ವಿವಿಧ ಸಮಾಜ ಕಲ್ಯಾಣ ಯೋಜನೆಗಳ ಫಲಾನುಭವಿಯಾಗಲು ಆಧಾರ್ ಕಡ್ಡಾಯವಾಗಿದೆ ಎಂದು ಈ ಹಿಂಂದೆ ಸುಪ್ರೀಂ ಕೋರ್ಟ್ ತೀರ್ಪು ನಿಡಿದೆ.

About the author

ಕನ್ನಡ ಟುಡೆ

Leave a Comment