ರಾಷ್ಟ್ರ ಸುದ್ದಿ

ಮತ್ತೆ ಇಳಿದ ತೈಲೋತ್ಪನ್ನ ದರಗಳು, ಇಂದಿನ ದರ ಪಟ್ಟಿ ಇಲ್ಲಿದೆ

ನವದೆಹಲಿ: ಹಲವು ದಿನಗಳ ಹಿಂದೆ ಗಗನಕ್ಕೇರಿ ಗ್ರಾಹಕನ ಜೇಬಿಗೆ ಕತ್ತರಿ ಹಾಕಿದ್ದ ತೈಲೋತ್ಪನ್ನಗಳ ಬೆಲೆ ಕ್ರಮೇಣ ಇಳಿಕೆಯತ್ತ ಸಾಗಿದ್ದು, ಇಂದೂ ಕೂಡ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದೆ.
ಅಂತಾರಾಷ್ಟ್ಕೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಗಣನೀಯವಾಗಿ ಇಳಿಕೆಯಾಗಿದ್ದು, ಅದರ ಪರಿಣಾಮ ಭಾರತೀಯ ತೈಲ ಮಾರುಕಟ್ಟೆಯ ಮೇಲೂ ಬೀರಿದೆ. ಪರಿಣಾಮ ಸತತ 13ನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಇಳಿಕೆ ಕಂಡುಬಂದಿದೆ. ಇಂದಿನ ನೂತನ ದರ ಪಟ್ಟಿಯ ಅನ್ವಯ ಪೆಟ್ರೋಲ್ ದರದಲ್ಲಿ 20 ಪೈಸೆಯಷ್ಟು ಮತ್ತು ಡೀಸೆಲ್ ದರದಲ್ಲಿ 7 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಇನ್ನು ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 79.55 ರೂಗೆ ಇಳಿಕೆಯಾಗಿದ್ದು, ಡೀಸೆಲ್ ದರ 73.78 ರೂಗೆ ಇಳಿಕೆಯಾಗಿದೆ. ಅಂತೆಯೇ ಮುಂಬೈನಲ್ಲಿ ಪೆಟ್ರೋಲ್ ದರ 85.04 ರೂ.ಗೆ ಮತ್ತು ಡೀಸೆಲ್ ದರ 77.32 ರೂಗೆ ಇಳಿಕೆಯಾಗಿದೆ.

About the author

ಕನ್ನಡ ಟುಡೆ

Leave a Comment