ರಾಷ್ಟ್ರ ಸುದ್ದಿ

ಮತ್ತೆ ಕಾಡಿದ ವಾಣಿಜ್ಯ ಸುಂಕ ಸಮರ: ಮುಂಬಯಿ ಶೇರು 200 ಅಂಕ ಕುಸಿತ

ಮುಂಬಯಿ : ಅಮೆರಿಕ – ಚೀನ ವಾಣಿಜ್ಯ ಸುಂಕ ಸಮರ ಮತ್ತೆ ಕಾಡಲಾರಂಭಿಸಿದ ಕಾರಣ ಜಾಗತಿಕ ಶೇರು ಪೇಟೆಗಳಲ್ಲಿ ಇಂದು ಬುಧವಾರ ಭಾರೀ ಶೇರು ಮಾರಾಟ ನಡೆದಿರುವುದನ್ನು ಅನುಸರಿಸಿ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್‌ ಸೂಚ್ಯಂಕ ಇಂದಿನ ಆರಂಭಿಕ ವಹಿವಾಟಿನಲ್ಲಿ 200ಕ್ಕೂ ಅಧಿಕ ಅಂಕಗಳ ನಷ್ಟಕ್ಕೆ ಗುರಿಯಾಯಿತು.

ಇಂದು ಬೆಳಗ್ಗೆ 10.30ರ ಹೊತ್ತಿಗೆ ಸೆನ್ಸೆಕ್ಸ್‌ 154.35 ಅಂಕಗಳ ನಷ್ಟದೊಂದಿಗೆ 35,979.96 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 60.30 ಅಂಕಗಳ ನಷ್ಟದೊಂದಿಗೆ 10,809.20 ಅಂಕಗಳ ಮಟ್ಟದಲ್ಲೂ  ವ್ಯವಹಾರ ನಿರತವಾಗಿದ್ದವು. ಇಂದಿನ ಆರಂಭಿಕ ವಹಿವಾಟಿನಲ್ಲಿ ಸನ್‌ ಫಾರ್ಮಾ, ಎಸ್‌ ಬ್ಯಾಂಕ್‌, ಎಚ್‌ ಡಿ ಎಫ್ ಸಿ, ರಿಲಯನ್ಸ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌ ಶೇರುಗಳು ಅತ್ಯಂತ ಕ್ರಿಯಾಶೀಲವಾಗಿದ್ದವು.

ಡಾಲರ್‌ ಎದುರು ರೂಪಾಯಿ ಇಂದಿನ ಆರಂಭಿಕ ವಹಿವಾಟಿನಲ್ಲಿ 26 ಪೈಸೆಗಳ ನಷ್ಟಕ್ಕೆ ಗುರಿಯಾಗಿ 70.75 ರೂ. ಮಟ್ಟದಲ್ಲಿ ವ್ಯವಹಾರ ನಿರತವಾಗಿತ್ತು. ಇಂದು ಬೆಳಗ್ಗಿನ ವಹಿವಾಟಿನ ಟಾಪ್‌ ಗೇನರ್‌ಗಳು : ಭಾರ್ತಿ ಇನ್‌ಫ್ರಾಟೆಲ್‌, ಎಚ್‌ ಡಿ ಎಫ್ ಸಿ ಬ್ಯಾಂಕ್‌, ಎಚ್‌ಯುಎಲ್‌, ಎನ್‌ಟಿಪಿಸಿ; ಟಾಪ್‌ ಲೂಸರ್‌ಗಳು : ಗ್ರಾಸಿಂ, ಹಿಂಡಾಲ್ಕೊ, ಟಾಟಾಮೋಟರ್‌, ಇಂಡಿಯಾ ಬುಲ್ಸ್‌ ಹೌಸಿಂಗ್‌, ಜೆಎಸ್‌ಡಬ್ಲ್ಯು ಸ್ಟೀಲ್‌.

About the author

ಕನ್ನಡ ಟುಡೆ

Leave a Comment