ರಾಷ್ಟ್ರ ಸುದ್ದಿ

ಮತ್ತೆ ಪಕ್ಷ ಸೇರಿದ ದೀಪಿಯಾ ಶಿರಚ್ಚೇದಕ್ಕೆ ಕರೆಕೊಟ್ಟಿದ್ದ ಹರಿಯಾಣ ಬಿಜೆಪಿ ಮುಖಂಡ

ಗುರುಗ್ರಾಮ: “ನನ್ನ ಮನೆಗೆ ನಾನು ಹಿಂತಿರುಗಿದ್ದೇನೆ, ನನಗೆ ಸಂತಸವಾಗುತ್ತಿದೆ” ಬಿಜೆಪಿ ನಾಯಕ ಸೂರಜ್ ಪಾಲ್ ಅಮು ಹೇಳಿದ್ದಾರೆ. ಹರಿಯಾಣ ಬಿಜೆಪಿ ಮುಖಂಡನ ರಾಜೀನಾಮೆಯನ್ನು ಪಕ್ಷ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅಮು ಈ ಹೇಳಿಕೆ ನೀಡಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣದ ದೀಪಿಕಾ ಪಡುಕೋಣೆ ನಾಯಕಿಯಾಗಿರುವ “ಪದ್ಮಾವತ್” ಚಿತ್ರದ ಬಿಡುಗಡೆ ವಿವಾದವೆದ್ದಾಗ ಬನ್ಸಾಲಿ ಹಾಗೂ ಪಡುಕೋಣೆಯ ತಲೆ ಕಡಿದವರಿಗೆ 10 ಕೋಟಿ ರು. ಬಹುಮಾನ ನೀಡುತ್ತೇನೆ ಎಂದು ಘೋಷಿಸಿದ್ದ ಸೂರಜ್ ಪಾಲ ಅಮು ಹರಿಯಾಣ ಬಿಜೆಪಿ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದರು.”ನಾನು ಬಿಜೆಪಿ ರಾಜ್ಯ ಘಟಕದ ಹಲವು ಹುದ್ದೆಗಳಿಗೆ ರಾಜೀನಾಮೆ ಸಲ್ಲಿಸಿದ್ದೆ ಆದರೆ ಇಂದು ಹರಿಯಾಣ ಬಿಜೆಪಿ ಮುಖ್ಯಸ್ಥ ಸುಭಾಷ್ ಬರಾಲಾ ಇದನ್ನು ತಿರಸ್ಕರಿಸಿದ್ದಾರೆ.29-30 ವರ್ಷಗಳ ಕಾಲ ನಾನು ಪಕ್ಷ ಮತ್ತು ಅದರ ಅಭಿವೃದ್ದಿಗಾಗಿ ಶ್ರಮಿಸಿಯೂ ಪಕ್ಷದಿಂದ ದೂರವಾಗಬೇಕಾಗಿ ಬಂದಿದ್ದ ಈ 8 ತಿಂಗಳುಗಳು ನನಗೆ ಬಹಳ ಕಠಿಣ ಸಮಯವಾಗಿತ್ತು.ದರೆ, ನಾನು ವಿವಿಧ ಸಾಮಾಜಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದೆ, ಈಗ ನನಗೆ ನನ್ನ ಮನೆಗೆ ಹಿಂತಿರುಗಿದಷ್ಟು ಸಂತಸವಾಗಿದೆ” ಕರ್ಣಿ ಸೇನಾ ಮುಖ್ಯಸ್ಥರಾಗಿರುವ ಸೂರಜ್ ಪದ್ಮಾವತ್” ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನಿಡಿದ್ದರು.ಈ ಹೇಳಿಕೆ ವಿಚಾರವಾಗಿ ಕಾರಣ ತಿಳಿಸುವಂತೆ ಪಕ್ಷ ಅವರಿಗೆ ನೋಟೀಸ್ ಜಾರಿ ಮಾಡಿದ್ದಾಗೆ ತಮ್ಮ ಹುದ್ದೆಗೆ ಅವರು ರಾಜೀನಾಮೆ ಸಲ್ಲಿಸಿದ್ದರು.

About the author

ಕನ್ನಡ ಟುಡೆ

Leave a Comment