ರಾಜ್ಯ ಸುದ್ದಿ

ಮತ್ತೆ ಪೆಟ್ರೋಲ್, ಡಿಸೆಲ್ ದರ ಏರಿಕೆ: ಇಂದಿನ ದರ ಪಟ್ಟಿ ಇಲ್ಲಿದೆ

ನವದೆಹಲಿ: ಪೆಟ್ರೋಲ್, ಡೀಸೆಲ್ ದರ ಜ.17 ರಂದು ಏರಿಕೆಯಾಗಿದ್ದು, ಪ್ರತಿ ಲೀಟರ್ ಪೆಟ್ರೋಲ್ ಗೆ 70.47 ರೂಪಾಯಿಗಳಾಗಿದೆ. ನವದೆಹಲಿಯಲ್ಲಿ ಪೆಟ್ರೋಲ್ ದರ  70.47 ರೂಪಾಯಿಯಾಗಿದ್ದರೆ ಡೀಸೆಲ್ ದರ 64.78 ರೂಪಾಯಿಯಾಗಿದೆ (0.19 ಏರಿಕೆ)  ಇದಕ್ಕೂ ಮುನ್ನ ಜ.14 ರಂದು ಪೆಟ್ರೋಲ್, ಡೀಸೆಲ್ ದರ ಅನುಕ್ರಮವಾಗಿ 38 ಪೈಸೆ, 49 ಪೈಸೆಗಳಷ್ಟು ಏರಿಕೆಯಾಗಿತ್ತು.
ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲ ದರ ಶೇ.30 ರಷ್ಟು ಕಡಿಮೆಯಾಗಿದ್ದ ಪರಿಣಾಮ ಕೆಲವು ದಿನಗಳ ಹಿಂದೆ ಭಾರತದಲ್ಲೂ ಪೆಟ್ರೋಲ್, ಡೀಸೆಲ್ ದರ ಇಳಿಕೆ ಕಂಡಿತ್ತು. ಆದರೆ ಇದೀಯ ಒಪೇಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಕಡಿಮೆ ಮಾಡಲು ನಿರ್ಧರಿಸಿರುವುದರಿಂದ ತೈಲ ಬೆಲೆ ದಿಢೀರ್ ಏರಿಕೆಯಾಗಿದೆ.

About the author

ಕನ್ನಡ ಟುಡೆ

Leave a Comment