ಸಿನಿ ಸಮಾಚಾರ

ಮದುವೆಗೆ ಸಿದ್ಧರಾದ ರಾಧಿಕಾ ಕುಮಾರಸ್ವಾಮಿ ಫೋಟೋ ವೈರಲ್

ನಟಿ ರಾಧಿಕಾ ಕುಮಾರಸ್ವಾಮಿ ಈಗ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಕೊಂಡಿದ್ದಾರೆ. ಭೈರಾದೇವಿ, ದಮಯಂತಿ, ರಾಜೇಂದ್ರ ಪೊನ್ನಪ್ಪ ಸಿನಿಮಾಗಳಲ್ಲಿ ಬಿಝಿಯಾಗಿದ್ದಾರೆ. ಭೈರಾದೇವಿ ಶೂಟಿಂಗ್‍ನಲ್ಲಿ ಸ್ಮಶಾಣದಲ್ಲಿ ಬಿದ್ದು ಗಾಯಗೊಂಡಿದ್ದ ರಾಧಿಕಾ ಈಗ ಚೇತರಿಸಿಕೊಂಡು ಚಿತ್ರೀಕರಣದಲ್ಲಿ ಮಗ್ನರಾಗಿದ್ದಾರೆ.

ಇದರ ಜತೆಗೆ ಕನ್ನಡ ಸೇರಿದಂತೆ ಮೂರು ಭಾಷೆಗಳಲ್ಲಿ ಸೆಟ್ಟೇರುತ್ತಿರುವ ಕಾಂಟ್ರಾಕ್ಟ್ (Kontract) ಸಿನಿಮಾ ಶೂಟಿಂಗ್‌ನಲ್ಲೂ ಬಿಝಿಯಾಗಿದ್ದಾರೆ. ಕನ್ನಡ, ತೆಲುಗಿನಲ್ಲಿ ಕಾಂಟ್ರಾಕ್ಟ್ ಎಂದು ಹೆಸರಿಟ್ಟಿದ್ದರೆ, ತಮಿಳಿನಲ್ಲಿ ‘ಇರುವರ್ ಒಪ್ಪಂದಂ’ ಎಂಬ ಶೀರ್ಷಿಕೆ ಇಡಲಾಗಿದೆ. ಈ ಚಿತ್ರದ ಫೋಟೋ ಒಂದು ಈಗ ಸಖತ್ ವೈರಲ್ ಆಗುತ್ತಿದೆ. ರಾಧಿಕಾ ಕುಮಾರಸ್ವಾಮಿ ಹಸೆಮಣೆ ಏರಲು ಮದುವೆಗೆ ಸಿದ್ಧವಾಗುತ್ತಿರುವ ಫೋಟೋ ಭಾರಿ ಸದ್ದು ಮಾಡಿದೆ. ಈಗಾಗಲೆ ಕಾಂಟ್ರಾಕ್ಟ್ ಸಿನಿಮಾದ ಟೀಸರ್ ರಿಲೀಸ್ ಆಗಿದ್ದು ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದೆ. ಗಂಡ ಹೆಂಡತಿ ನಡುವಿನ ಸಂಬಂಧದ ಕಥಾಹಂದರ ಸಿನಿಮಾ ಒಳಗೊಂಡಿದೆ.

ಈ ಚಿತ್ರದಲ್ಲಿ ಅರ್ಜುನ್ ಸರ್ಜಾ, ಜೆಡಿ ಚಕ್ರವರ್ತಿ, ಫೈಸಲ್ ಖಾನ್ ಮುಖ್ಯಭೂಮಿಕೆಯಲ್ಲಿದ್ದಾರೆ. ಅರ್ಜುನ್ ಸರ್ಜಾ ಚಿತ್ರದಲ್ಲಿ ಬಿಝಿನೆಸ್ ಮ್ಯಾನ್ ಪಾತ್ರ ಪೋಷಿಸಿದ್ದಾರೆ. ರಾಧಿಕಾ ಕುಮಾರಸ್ವಾಮಿ ಅವರದು ಸಾಫ್ಟ್‌ವೇರ್ ಇಂಜಿನಿಯರ್ ಪಾತ್ರವಾಗಿದ್ದು, ಇದೊಂದು ಬೋಲ್ಡ್ ಪಾತ್ರ ಎನ್ನಾಲಾಗಿದೆ. ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳುತ್ತಿರುವವರು ಸಮೀರ್. ಸುಭಾಷ್ ಆನಂದ್ ಸಂಗೀತ ಇರುವ ಈ ಸಿನಿಮಾ ಬಹುಶಃ ಏಪ್ರಿಲ್‌ಗೆ ತೆರೆಕಾಣುವ ಸಾಧ್ಯತೆಗಳಿವೆ.

About the author

ಕನ್ನಡ ಟುಡೆ

Leave a Comment