ರಾಜ್ಯ ಸುದ್ದಿ

ಮದುವೆಯಾಗುವವಳಿಗೆ ಇದೆಲ್ಲಾ ತಿಳಿದಿರಬೇಕು ಎಂದು ಅಪ್ರಾಪ್ತ ಮಗಳ ಮೇಲೆ ಪಾಪಿ ತಂದೆ ರೇಪ್

ಬೆಂಗಳೂರು: ಕಾಮುಕ ತಂದೆಯೊಬ್ಬ ಕಳೆದ ಎರಡು ವರ್ಷಗಳಿಂದ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರ ಮಾಡಿರುವ ಪ್ರಕರಣವೊಂದು ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಕಳೆದ ಎರಡು ವರ್ಷಗಳ ಹಿಂದೆ ಮನೆಯಲ್ಲಿ ಹೆಂಡತಿ ಇಲ್ಲದ ಸಂದರ್ಭದಲ್ಲಿ 14 ವರ್ಷದ ಮಗಳನ್ನು ಕರೆದು ಪಾಪಿ ತಂದೆ ನೀನು ಮುಂದೆ ಮದುವೆಯಾಗುವ ಹುಡುಗಿ ನಿನಗೆ ಇದೆಲ್ಲಾ ಗೊತ್ತಿರಬೇಕು ಎಂದು ಮಗಳನ್ನೇ ತಮ್ಮ ಕಾಮತೃಷೆಗೆ ಬಳಸಿಕೊಂಡಿದ್ದಾನೆ. ಅಲ್ಲದೆ ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಪಾಪಿ ತಂದೆಯನ್ನು ಅಮೀರ್ ಎಂದು ಗುರುತಿಸಲಾಗಿದೆ. ತಂದೆಯ ವರ್ತನೆಯಿಂದ ಬೇಸತ್ತ ಮಗಳು ಕೊನೆಗೆ ತನ್ನ ತಾಯಿ ಬಳಿ ಈ ವಿಚಾರವನ್ನು ಹೇಳಿಕೊಂಡಿದ್ದಾಳೆ. ಕೂಡಲೇ ಸಂತ್ರಸ್ತ ಬಾಲಕಿಯ ತಾಯಿ ಬನಶಂಕರಿ ಪೊಲೀಸ್ ಠಾಣೆಗೆ ತೆರಳಿ ತನ್ನ ಗಂಡನ ವಿರುದ್ಧ ಅತ್ಯಾಚಾರ ದೂರನ್ನು ದಾಖಲಿಸಿದ್ದಾಳೆ.

ಮಹಿಳೆಯ ದೂರಿನನ್ವಯ ಅಮೀರ್ ವಿರುದ್ಧ ಐಪಿಸಿ ಸೆಕ್ಷನ್ 506, 376, 511 ಹಾಗೂ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಸದ್ಯ ಅಮೀರ್ ತಲೆಮರೆಸಿಕೊಂಡಿದ್ದು ಆತನ ಪತ್ತೆಯಾಗಿ ಪೊಲೀಸರು ಬಲೆ ಬೀಸಿದ್ದಾರೆ.

About the author

ಕನ್ನಡ ಟುಡೆ

Leave a Comment