ರಾಜ್ಯ ಸುದ್ದಿ

ಮದುವೆ ಸಮಾರಂಭದಲ್ಲಿ ಮೋದಿ: ಲಗ್ನ ಪತ್ರಿಕೆಯಲ್ಲಿ ಮೋದಿ ಫೋಟೋ ಮುದ್ರಿಸಿ ಅಭಿಮಾನ ಮೆರೆದ ಜೋಡಿ

ಮೈಸೂರು: ಸಾಮಾನ್ಯವಾಗಿ ಲಗ್ನ ಪತ್ರಿಕೆಗಳಲ್ಲಿ ದೇವರ ಫೋಟೋ, ಸ್ವಾಮೀಜಿಗಳ ಅಥವಾ ವಧು-ವರನ ಫೋಟೋಗಳನ್ನು ಮುದ್ರಿಸಿರುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಜೋಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಲಗ್ನ ಪತ್ರಿಯೆಲ್ಲಿ ಮುದ್ರಿಸಿ ಅಭಿಮಾನ ಮೆರೆದಿದ್ದಾರೆ.
ಲಗ್ಗನ ಪತ್ರಿಕ ಮೇಲೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಫೋಟೋವನ್ನು ಮುದ್ರಿಸಿರುವ ಜೋಡಿಗಳು ನಿನ್ನೆಯಷ್ಟೇ ಹಸೆಮಣೆ ಏರಿದ್ದಾರೆ. ಸದೃಢ ಭಾರತ ನಿರ್ಮಾಣಕ್ಕೆ ಮತ್ತೊಮ್ಮೆ ನರೇಂದ್ರ ಮೋದಿಯವರನ್ನೇ ಬೆಂಬಲಿಸಿ ಎಂಬ ಸಂದೇಶವನ್ನು ಲಗ್ನಪತ್ರಿಕೆಯಲ್ಲಿ ಮುದ್ರಿಸುವ ದಂಪತಿಗಳು ಊರಿಗೆಲ್ಲಾ ಪತ್ರಿಕೆಯನ್ನು ಹಂಚಿ, ಸಪ್ತಪದಿ ತುಳಿದಿದ್ದಾರೆ. ಇದಲ್ಲದೆ, ಮದುವೆ ಆರತಕ್ಷತೆಗೆ ಬಂದವರಿಗೆಲ್ಲರಿಗೂ ಮೋದಿ ಫೋಟೋ ಹಿಡಿಸಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರಿಗೆ ಬೆಂಬಲ ನೀಡುವಂತೆ ತಿಳಿಸಿ ಅಭಿಮಾನ ಮೆರೆದಿದ್ದಾರೆ.
ಲಗ್ನಪತ್ರಿಕೆ ಮೇಲೆ ಪ್ರಧಾನಿ ಮೋದಿಯವರ ಫೋಟೋ ಹಾಕಿಸಿದ್ದು ನಮ್ಮ ಹೆಮ್ಮೆ. ನನಗೆ ಮೋದಿ ಎಂದರೆ ಬಹಳ ಇಷ್ಟ. ಮತ್ತೊಮ್ಮೆ ಅವರೇ ಪ್ರಧಾನಮಂತ್ರಿಗಳಾಗಬೇಕೆಂದು ಬಯಸಿದ್ದೇನೆ. ಮದುವೆಯಲ್ಲಿ ಮೋದಿಯವರ ಪರ ಪ್ರಚಾರ ನಡೆಸಬೇಕೆಂದು ಬಯಸಿದ್ದೆ ಎಂದು ವರ ಆನಂದ್ ಸ್ವಾಮಿಯವರು ಹೇಳಿದ್ದಾರೆ.
ಆನಂದ್ ಸ್ವಾಮಿಯವರ ಗೆಳೆಯ ಪ್ರಣಯ್ ಮಾತನಾಡಿ, ಮುಂಬರುವ ಚುನಾವಣೆಯಲ್ಲಿ ಮೋದಿ ಪರ ಪ್ರಚಾರ ನಡೆಸಬೇಕೆಂದು ಗೆಳೆಯ ಬಯಸಿದ್ದ. ರಾಜಕೀಯ ಕಾರಣಗಳಿಂದಾಗಿ ಕೆಲವರು ಮೋದಿಯವರ ಫೋಟೋದೊಂದಿಗೆ ಫೋಟೋ ತೆಗೆಸಿಕೊಳ್ಳಲು ಇಷ್ಟಪಟ್ಟಿರಲಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment