ಸುದ್ದಿ

ಮದ್ಯ ಖರೀದಿಗೂ ಆಧಾರ್ ಕಡ್ಡಾಯ!

ತೆಲಂಗಾಣ: ಇನ್ಮುಂದೆ ಪಬ್ ಗಳಿಗೆ ಮದ್ಯ ಖರೀದಿ ಮಾಡುವುದು ಅಷ್ಟು ಸುಲಭವಲ್ಲ. ತೆಲಂಗಾಣ ಅಬಕಾರಿ ಇಲಾಖೆ ಪಬ್ ಗಳಿಗೆ ಹೋಗಿ ಮದ್ಯ ಖರೀದಿ ಮಾಡುವ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ದಂಪತಿಗಳು ಹಾಗು ಮದುವೆ ಆಗೋರು ತಿಳಿಯಬೇಕಾದ ವಿಷಯಗಳೇನು?

ಮದ್ಯ ಮಾರಾಟ ಮಾಡುವ ಪಬ್ ಗಳಲ್ಲಿ ಮದ್ಯದ ಜತೆಗೆ ನಶೆಯ ಪದಾರ್ಥಗಳನ್ನು (ಡ್ರಗ್ಸ್) ಮಾರಾಟ ಮಾಡಲಾಗುತ್ತಿದೆ. ಇಂತಹ ಅನೇಕ ಜಾಲಗಳು ಪೋಲಿಸ್ ಬಲೆಗೆ ಬಿದ್ದಿವೆ. ಹೀಗಾಗಿ ಸರ್ಕಾರ ಪಬ್ ಗಳಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಿದೆ. ಇದರಿಂದ ಯಾರು ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದಾರೆ ಎನ್ನುವ ಬಗ್ಗೆ ಮಾಹಿತಿ ಕಲೆ ಹಾಕಲು ಅಬಕಾರಿ ಇಲಾಖೆ ಸಹಾಯಕವಾಗಲಿದೆ.

ಸರ್ಕಾರ ನಗರದ ಪಬ್ ಮಾಲೀಕರಿಗೆ ಈ ಬಗ್ಗೆ ನೊಟೀಸ್ ಜಾರಿಗೊಳಿಸಿದ್ದು, ಮದ್ಯ ಖರೀದಿಗೆ ಬರುವ ಗ್ರಾಹಕರು ಆಧಾರ್ ಕಾರ್ಡ್ ತರುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಲು ತಿಳಿಸಿದೆ. 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಪಬ್ ಗೆ ಪ್ರವೇಶ ನೀಡಬೇಡಿ ಎಂದು ಸರ್ಕಾರ ಸೂಚನೆ ನೀಡಿದೆ.

ಪಬ್ ಗೆ ಬರುವ ಗ್ರಾಹಕರ ಮಾಹಿತಿ ಸಂಗ್ರಹಕ್ಕೆ ಪ್ರತ್ಯೇಕ ನೋಂದಣಿ ಪುಸ್ತಕ ಇಟ್ಟಕೊಳ್ಳುವಂತೆ ಪಬ್ ಮಾಲೀಕರಿಗೆ ಸರ್ಕಾರ ಸೂಚನೆ ನೀಡಿದೆ. ಮದ್ಯ ಖರೀದಿಗೆ ಬರುವ ಗ್ರಾಹಕರ ಕುರಿತುಸಂಪೂರ್ಣ ಮಾಹಿತಿ ಇಡುವಂತೆ ಸೂಚಿಸಲಾಗಿದೆ.

About the author

ಕನ್ನಡ ಟುಡೆ

Leave a Comment