ರಾಷ್ಟ್ರ ಸುದ್ದಿ

ಮದ್ರಾಸ್: ಕ್ಯಾಂಪಸ್ ಕ್ವಾರ್ಟರ್ಸ್ ನಲ್ಲಿ ಐಐಟಿ ಬೋಧಕ ಸಿಬ್ಬಂದಿ ಆತ್ಮಹತ್ಯೆ

ಚೆನ್ನೈ: ಇಂಡಿಯನ್ ಇನ್ಸ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಬೋಧಕ ಸಿಬ್ಬಂದಿಯೊಬ್ಬರು ಕಾಲೇಜ್ ಕ್ಯಾಂಪಸ್ ನಲ್ಲೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮದ್ರಾಸ್ ನಲ್ಲಿ ನಡೆದಿದೆ. ಬೆಂಗಳೂರು ಮೂಲದ ಸಹಾಯಕ ಪ್ರೊಫೆಸರ್ ಅದಿತಿ ಸಿಂಹ(48) ಎಂದು ಗುರುತಿಸಲಾಗಿದೆ,  ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾದ್ಯಾಪಕರಾಗಿದ್ದರು. ಪತಿಯಿಂದ ದೂರವಾಗಿದ್ದ ಅದಿತಿ ಕ್ಯಾಂಪಸ್ ನಲ್ಲಿ  ಒಂಟಿಯಾಗಿ ವಾಸಿಸುತ್ತಿದ್ದರು. ಸೋಮವಾರ ರಾತ್ರಿ, ಅದಿತಿ ಸಿಂಹ ಜೀವನ್ಮರಣದ ನಡುವೆ ಹೋರಾಡುತ್ತಿದ್ದುದ್ದನ್ನು ಗಮನಿಸಿದ ಅವರ ಸಹೋದ್ಯೋಗಿ ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು.  ಆದರೆ ಬೆಳಗ್ಗೆ 4ಗಂಟೆಗೆ ಆಕೆ ಸಾವನ್ನಪ್ಪಿದ್ದರು. ಈ ಸಂಬಂಧ ಕೊಟ್ಟೂರ್ಪುರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಅವರ ಸಾವಿಗೆ ಕಾರಣ ಏನು ಎಂಬುದು ತಿಳಿದು ಬಂದಿಲ್ಲ.

About the author

ಕನ್ನಡ ಟುಡೆ

Leave a Comment