ರಾಷ್ಟ್ರ ಸುದ್ದಿ

ಮಧ್ಯಪ್ರದೇಶ: ಕಾಂಗ್ರೆಸ್​ 140ಕ್ಕೂ ಹೆಚ್ಚು ಸ್ಥಾನವನ್ನು ಗೆಲ್ಲಲಿದೆ: ಕಮಲ್​ನಾಥ್

ಭೋಪಾಲ್​: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಕಾಂಗ್ರೆಸ್​ ರಾಜ್ಯ ಘಟಕದ ಮುಖ್ಯಸ್ಥ ಕಮಲ್​ನಾಥ್ ಅವರು ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ಕಾಂಗ್ರೆಸ್​ ಖಂಡಿತವಾಗಿಯೂ 140 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದರು. ಅಲ್ಲದೆ ಮಧ್ಯ ಪ್ರದೇಶದಲ್ಲಿ ಈ ಬಾರಿ ಬಿಜೆಪಿಗೆ ಮತದಾರು ಖಂಡಿತಾ ಶಾಕ್ ನೀಡಲಿದ್ದು, ಕಾಂಗ್ರೆಸ್ ಪಕ್ಷ ಸರ್ಕಾರ ರಚನೆ ಮಾಡಲಿದ್ದಾರೆ ಎಂದು ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಫಲಿತಾಂಶ ಬರುವರೆಗೂ ಕಾಯೋಣ, ನಾಳೆ ಮಧ್ಯಾಹ್ನದ ಎಲ್ಲವೂ ಸ್ಪಷ್ಟವಾಗಿ ಗೊತ್ತಾಗಲಿದೆ ಎಂದರು.
ಮಧ್ಯಪ್ರದೇಶವೂ 230 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಸರ್ಕಾರ ರಚನೆಗೆ 116 ಬಹುಮತವನ್ನು ಸಾಧಿಸಬೇಕಾಗಿದೆ. ಮತದಾನೋತ್ತರ ಸಮೀಕ್ಷೆಯಲ್ಲಿ ಕಾಂಗ್ರೆಸ್​ ಮತ್ತು ಬಿಜೆಪಿ ಎರಡೂ ಪಕ್ಷಗಳು ಪ್ರಬಲ ಪೈಪೋಟಿ ನೀಡಿದ್ದು, ಯಾರಿಗೆ ಮಧ್ಯಪ್ರದೇಶದ ಗದ್ದುಗೆ ಒಲಿಯಲಿದೆ ಎಂಬುದು ಇಂದು ಮಧ್ಯಾಹ್ನದ ವೇಳೆಗೆ ತಿಳಿಯಲಿದೆ. ಕಳೆದ ನವೆಂಬರ್​ 28ರಂದು ಇಲ್ಲಿ  ಚುನಾವಣೆ ನಡೆದಿತ್ತು.
ಚುನಾವಣ ಕಣದಲ್ಲಿ 2,899 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಇದರಲ್ಲಿ 250 ಮಹಿಳಾ ಹಾಗೂ ಐದು ತೃತೀಯ ಲಿಂಗಿ ಅಭ್ಯರ್ಥಿಗಳು ಕಣದಲ್ಲಿದ್ದರು. ಪ್ರಸ್ತುತ ಇರುವ ಬಿಜೆಪಿ ನೇತೃತ್ವದ ಸರ್ಕಾರದ ಅಧಿಕಾರದ ಅವಧಿ 2018, ಜನವರಿ 7ರಂದು ಕೊನೆಗೊಳ್ಳಲಿದೆ. 2003 ರಿಂದ ಅಧಿಕಾರದ ಗದ್ದುಗೆಯಲ್ಲಿರುವ ಬಿಜೆಪಿ ನಾಲ್ಕನೇ ಬಾರಿಯೂ ತನ್ನ ಕುರ್ಚಿಯನ್ನು ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

About the author

ಕನ್ನಡ ಟುಡೆ

Leave a Comment