ರಾಷ್ಟ್ರ ಸುದ್ದಿ

ಮಧ್ಯ ಪ್ರದೇಶ: 1 ಲಕ್ಷ ಹಸುಗಳ ರಕ್ಷಣೆಗೆ 1 ಸಾವಿರ ಗೋಶಾಲೆ ನಿರ್ಮಾಣ

ಭೋಪಾಲ್: ಬೀಡಾಡಿ ದನಗಳ ಹಾವಳಿ ತಪ್ಪಿಸುವ ಸಲುವಾಗಿ ಮಧ್ಯ ಪ್ರದೇಶ ಸರ್ಕಾರ ರಾಜ್ಯಾದ್ಯಂತ 1000 ಗೋಶಾಲೆಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಈ ಗೋಶಾಲೆಗಳಲ್ಲಿ  1 ಲಕ್ಷ ಗೋವುಗಳನ್ನು ರಕ್ಷಿಸಲಾಗುವುದು.
ಸಾವಿರ ಗೋಶಾಲೆಗಳು ಮುಂದಿನ ಮೇ ತಿಂಗಳಲ್ಲಿ ಪ್ರಾರಂಭಗೊಳ್ಲಲಿದೆ. ಗೋ ರಕ್ಷಣೆಯ ಯೋಜನೆ ಮೊದಲ ಹಂತದಲ್ಲಿ  6 ತಿಂಗಳುಗಳ ಗುರಿ ಹಾಕಿಕೊಳ್ಳಲಾಗಿದೆ. ಈ ವೇಳೆ ಸಾವಿರ ಗೋಶಾಲೆ ನಿರ್ಮಾಣವಾಗಬೇಕಿದೆ”ಮುಖ್ಯಮಂತ್ರಿ ಕಮಲ್ ನಾಥ್ ಅವರ ವಿಶೇಷ ಕಾರ್ಯಕಾರಿ ಅಧಿಕಾರಿಯಾಗಿರುವ ಭೂಪೇಂದ್ರ ಗುಪ್ತಾ, ಎಎನ್ ಐ ಗೆ ತಿಳಿಸಿದ್ದಾರೆ. 450 ಕೋಟಿ ರೂ. ಅಂದಾಜು ವೆಚ್ಚದ ಯೋಜನೆ ಇದಾಗಿದ್ದು ರಾಜ್ಯದಲ್ಲಿ ಈ ಬಗೆಯ ಯೋಜನೆ ಇದೇ ಮೊದಲ ಬಾರಿಗೆ ಜಾರಿಗೊಳ್ಳುತ್ತಿದೆ ಎಂದು ಅವರು ವಿವರಿಸಿದ್ದಾರೆ.”ರಾಜ್ಯ ಸರ್ಕಾರ ನಡೆಸುವ ಗೋಶಾಲೆಗಳು ನಮ್ಮ ರಾಜ್ಯದಲ್ಲಿಲ್ಲ. ಇದೇ ಮೊದಲ ಬಾರಿಗೆ ಇಂತಹಾ ಯೋಜನೆ ಜಾರಿಗೆ ಬರುತ್ತಿದೆ.. ಮೊದಲ ಹಂತದಲ್ಲಿ 1000 ಗೋಶಾಲೆ ಪ್ರಾರಂಭಿಸುವ ಕಾರ್ಯ ಇದಾಗಲೇ ಪ್ರಾರಂಭವಾಗಿದೆ”
ರಾಜ್ಯದಲ್ಲಿ ಸುಮಾರು ಆರು ಲಕ್ಷ ಗೋವುಗಳಿಗೆ ಆಶ್ರಯ ನಿಡಬೇಕಾಗಿದೆ. ಸರ್ಕಾರ ರಾಜ್ಯದಲ್ಲಿನ ಖಾಸಗಿ ಗೋಶಾಲೆಗಳ ಸಾಮರ್ಥ್ಯ ಹೆಚ್ಚಳ ಮಾಡುವ ಕುರಿತೂ ಚಿಂತನೆ  ನಡೆಸಿದೆ.”ಮೊದಲ ಹಂತದಲ್ಲಿ, 614 ಖಾಸಗಿ ಗೋಶಾಲೆಗಳ ಸಾಮರ್ಥ್ಯವನ್ನು 60,000ಕ್ಕೆ ಹೆಚ್ಚಿಸಲು ತೀರ್ಮಾನಿಸಲಾಗಿದೆ. ಹೀಗಾಗಿ ಮೊದಲ ಹಂತದಲ್ಲಿ ನಾವು  1,60,000 ಗೋವುಗಳಿಗೆ ಆಶ್ರಯ ನೀಡಲಿದ್ದೇವೆ.” ಗುಪ್ತಾ ಹೇಳಿದ್ದಾರೆ. ಪ್ರಸ್ತುತ ಪ್ರತಿ ಹಸುವಿಗೆ ವೆಚ್ಚ ಮಾಡುವ ಹಣ ಕೇವಲ 4.50  ರು. ಆಗಿದ್ದು ಇದನ್ನು 20 ರು.ಗೆ ಹೆಚ್ಚಿಸಲು ಗುರಿ ಹಾಕಿಕೊಂಡಿದ್ದಾಗಿ ಅವರು ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment