ರಾಷ್ಟ್ರ ಸುದ್ದಿ

ಮನಸ್ಸು ಮಾಡಿದರೆ ಎಂತಹ ರೋಗವನ್ನು ಮೆಟ್ಟಿ ನಿಲ್ಲಬಹುದು: ವಿಶ್ವ ಕ್ಯಾನ್ಸರ್ ದಿನಕ್ಕೆ ಮನೋಹರ್ ಪರಿಕ್ಕರ್ ಸಂದೇಶ

ನವದೆಹಲಿ: ಕ್ಯಾನ್ಸ,ರ್ ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಆಸ್ಪತ್ರೆಯಿಂದಲೇ ವಿಶ್ವ ಕ್ಯಾನ್ಸರ್ ದಿನದ ಸಂದೇಶ ನೀಡಿದ್ದು,
‘ಮನುಷ್ಯ ಮನಸ್ಸು ಮಾಡಿದರೆ ಎಂತಹ ರೋಗವನ್ನಾದರೂ ಮೆಟ್ಟಿ ನಿಲ್ಲಬಹುದು’ ಎಂದು ಸೋಮವಾರ ಟ್ವೀಟ್ ಮಾಡಿದ್ದಾರೆ. 63 ವರ್ಷದ ಪರಿಕ್ಕರ್ ಅವರು ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ವಿಶ್ವ ಕ್ಯಾನ್ಸರ್ ದಿನವಾದ ಹಿನ್ನಲೆಯಲ್ಲಿ ‘ಮನುಷ್ಯ ಮನಸ್ಸು ಮಾಡಿದರೆ ಎಂತಹ ರೋಗವನ್ನಾದರೂ ಮೆಟ್ಟಿ ನಿಲ್ಲಬಹುದು’ ಎಂದು ಟ್ವೀಟ್ ಮಾಡಿದ್ದಾರೆ. ಕಳೆದ ಗುರುವಾರ ಏಮ್ಸ್ ಆಸ್ಪತ್ರೆಗೆ ದಾಖಲಾಗಿರುವ ಪರಿಕ್ಕರ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment