ರಾಷ್ಟ್ರ

ಮನೆಯೂಟ ತಂದು ವೃದ್ಧೆ ಜೊತೆ ಊಟ ಮಾಡಿದ ಕರೂರು ಕಲೆಕ್ಟರ್

ಕರೂರ್: ಪ್ರತಿಷ್ಠೆ ಮರೆತ ಅಧಿಕಾರಿಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದ ವೃದ್ಧೆಯ ಮನೆಗೆ ಭೇಟಿ ನೀಡಿ ಮನೆಯೂಟ ತಂದು ಆಕೆಯ ಜೊತೆಗೆ ಊಟ ಮಾಡಿ ಮಾನವೀಯತೆ ಮರೆದು ಈ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.  ಕರೂರ್ ನಗರದ ಕಲೆಕ್ಟರ್ ಟಿ. ಅನ್ಬಾಝಗನ್ ಮಾನವೀಯತೆ ಮೆರೆದ ಅಧಿಕಾರಿಯಾಗಿದ್ದಾರೆ. ತಮಿಳುನಾಡಿನ ಕರೂರು ಎಂಬ ನಗರದಲ್ಲಿ ಚಿನ್ನಮನೈಕೆನ್ಪಟ್ಟಿ ಎಂಬಲ್ಲಿ 80 ವರ್ಷದ ವೃದ್ಧೆಯೊಬ್ಬರು ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಅನ್ಬಾಝಗನ್ ಅವರು ಮನೆಯ ಊಟದೊಂದಿಗೆ ವೃದ್ಧೆಯ ಮನೆಗೆ ಭೇಟಿ ನೀಡಿ ಆಕೆಯೊಂದಿಗೆ ಊಟವನ್ನು ಮಾಡಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಅನ್ಬಾಝಗನ್ ಅವರು ಕರೂರ್ ನಗರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸ್ಥಳೀಯರು ಚಿನ್ನಮನೈಕೆನ್ಪಟ್ಟಿ ಎಂಬಲ್ಲಿ ವೃದ್ಧೆಯೊಬ್ಬರು ಕಡುಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ. ಅಕೆಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಮನವಿ ಮಾಡಿಕೊಂಡಿದ್ದರು. ಈ ಮಾಹಿತಿ ತಿಳಿಯುತ್ತಿದ್ದಂತೆಯೇ ಅನ್ಬಾಝಗನ್ ಅವರು ವೃದ್ಧೆಯ ಮನೆಗೆ ಭೇಟಿ ನೀಡಿದ್ದಾರೆ. ಅಧಿಕಾರಿಯನ್ನು ಕಂಡ ವೃದ್ಧ ಮಹಿಳೆ ಗಾಬರಿಗೊಂಡಿದ್ದಾರೆ. ಈ ವೇಳೆ ಸಮಾಧಾನ ಪಡಿಸಿರುವ ಅನ್ಬಾಝಗನ್ ಅವರು ಕೈಯಲ್ಲಿ ಹಿಡಿದ ಊಟವನ್ನು ಕೆಳಗಿಟ್ಟು ಬಾಳೆಎಲೆಯನ್ನು ತರುವಂತೆ ತಿಳಿಸಿದ್ದಾರೆ.

ಬಳಿಕ ಮಹಿಳೆಯ ಎದುರಿಗೆ ನೆಲದ ಮೇಲೆ ಕುಳಿತು ಎಲೆಗಳನ್ನು ಹಾಕಿ ಊಟವನ್ನು ಬಡಿಸಿದ್ದಾರೆ. ನಂತರ ವೃದ್ಧೆಯ ಜೊತೆಗೇ ಅಧಿಕಾರಿ ಕೂಡ ಊಟವನ್ನು ಮಾಡಿದ್ದಾರೆ. ಬಳಿಕ ಪ್ರತಿಕ್ರಿಯೆ ನೀಡಿರುವ ಅನ್ಬಾಝಗನ್ ಅವರು ವೃದ್ಧ ಮಹಿಳೆಗೆ ತಿಂಗಳಿಗೆ ರೂ.1000 ಪಿಂಚಣಿ ಹಣವನ್ನು ನೀಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ವೃದ್ಧಾಪ್ಯ ಸಮಸ್ಯೆಗಳಿಂದಾಗಿ ಜೀವನ ನಡೆಸಲು ಆಕೆಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ವೃದ್ಧಾಪ್ಯ ಪಿಂಚಣಿ ಯೋಜನೆ ಇರುವುದು ಇಂತಹ ಜನರಿಗೆ ಸಹಾಯ ಮಾಡುವ ಸಲುವಾಗಿ ಇಂತಹ ಜನರ ಕುರಿತಂತೆ ಮಾಹಿತಿ ಕಲೆ ಹಾಕಿ ಜಿಲ್ಲಾ ಆಡಳಿತ ಮಂಡಳಿ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಅನ್ಬಾಝಗನ್ ಅವರು ತಿಳಿಸಿದ್ದಾರೆ.

 

 

About the author

ಕನ್ನಡ ಟುಡೆ

Leave a Comment