ಸಿನಿ ಸಮಾಚಾರ

ಮನೋರಂಜನ್ ರವಿಚಂದ್ರನ್  ಸಿನಿಮಾದಲ್ಲಿ ರಾಘಣ್ಣ ವಿಲನ್

ಬೆಂಗಳೂರು: ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ “ಬೃಹಸ್ಪತಿ” ಚಿತ್ರದ ಬಳಿಕ “ಚಿಲಂ” ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್ ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ಕ್ವಾಟ್ಲೆ ಚಿತ್ರವನ್ನು ನಿರ್ದೇಶಿಸಿದ್ದ ಚಂದ್ರಕಲಾ ಅವರು ಚಿಲಂ ಚಿತ್ರವನ್ನು ನಿರ್ದೇಶಿಸಲಿದ್ದಾರೆ. ಈ ಚಿತ್ರದಲ್ಲಿ ಮನೋರಂಜನ್ ಗಾಂಜಾ ಸ್ಮಗ್ಲರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ರಾಘವೇಂದ್ರ ರಾಜಕುಮಾರ್ ಕೂಡ ಚಿಲಂ ತಂಡ ಸೇರಿಕೊಳ್ಳತ್ತಾರೆ ಎಂದು ಕೇಳಿರುತ್ತಿದೆ.

ನಿರ್ದೇಶಕಿ ಚಂದ್ರಕಲಾ ಅವರು ಅದಾಗಲೇ ರಾಘವೇಂದ್ರ ರಾಜಕುಮಾರ್ ಅವರನ್ನು ಭೇಟಿ ಮಾಡಿ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ವಿವರಿಸಿದ್ದಾರೆ. ಚಿತ್ರದ ಪಾತ್ರ ಕೂಡ ರಾಘಣ್ಣ ಅವರಿಗೆ ಇಷ್ಟವಾಗಿದ್ದು ಚಿತ್ರದಲ್ಲಿ ನಟಿಸಲು ಒಪ್ಪಿಕೊಳ್ಳುವ ಸಾಧ್ಯತೆ ಇದೆ ತಿಳಿದು ಬಂದಿದೆ.

 

About the author

ಕನ್ನಡ ಟುಡೆ

Leave a Comment