ರಾಷ್ಟ್ರ ಸುದ್ದಿ

ಮಮತಾ ಧೈರ್ಯವಂತ ಮಹಿಳೆ, ಬಿಜೆಪಿ ವಿರೋಧಿ ಮೈತ್ರಿಕೂಟ ಮುನ್ನಡೆಸಬಲ್ಲರು: ಯಶವಂತ್ ಸಿನ್ಹಾ

ಕೋಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಹಾಡಿಹೊಗಳಿದ ಮಾಜಿ ಕೇಂದ್ರ ಸಚಿವ ಯಶವಂತ್ ಸಿನ್ಹಾ ಅವರು, ದೀದಿ ಒಬ್ಬ ಧೈರ್ಯವಂತ ಮಹಿಳೆಯಾಗಿದ್ದು, ಅವರಿಗೆ ಬಿಜೆಪಿ ವಿರೋಧಿ ಮೈತ್ರಿಕೂಟವನ್ನು ಮುನ್ನಡೆಸುವ ಸಾಮರ್ಥ್ಯ ಇದೆ ಎಂದು ಸೋಮವಾರ ಹೇಳಿದ್ದಾರೆ.
ಇಂದು ತೃಣಮೂಲ ಕಾಂಗ್ರೆಸ್ ಆಯೋಜಿಸಿದ್ದ ಐಡಿಯಾ ಆಫ್ ಬೆಂಗಾಲ್  ಟಾಕ್ ಶೋ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಅನ್ನು ಸೋಲಿಸು ಪ್ರತಿಪಕ್ಷಗಳ ಮೈತ್ರಿಕೂಟ ರಚನೆಯಾದರೆ, ಅದರನ್ನು ನೇತೃತ್ವವನ್ನು ವಹಿಸಿಕೊಳ್ಳಲು ಬೇಕಾದ ಅಲ್ಲ ಅರ್ಹತೆಗಳನ್ನು ಮಮತಾ ಹೊಂದಿದ್ದಾರೆ ಎಂದರು. ಸ್ವತಃ ನನಗೂ ಸಮ್ಮಿಶ್ರ ಸರ್ಕಾರದ ಅನುಭವ ಆಗಿದೆ. ಪ್ರಧಾನಮಂತ್ರಿಗೆ ಎಲ್ಲಾ ಮಿತ್ರಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸಾಮರ್ಥ್ಯವಿದ್ದರೆ ಉತ್ತಮ ಮತ್ತು ಸ್ಥಿರ ಸರ್ಕಾರ ನೀಡಬಹುದು ಎಂದು ವಾಜಪೇಯಿ ಸರ್ಕಾರದಲ್ಲಿ ಹಣಕಾಸು ಮತ್ತು ವಿದೇಶಾಂಗ ಖಾತೆ ಹೊಂದಿದ್ದ ಯಶವಂತ್ ಸಿನ್ಹಾ ಅವರು ಹೇಳಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಹಾಗೂ ಅವರ ತೃಣಮೂಲ ಕಾಂಗ್ರೆಸ್ ಪ್ರಮುಖ ಪಾತ್ರ ವಹಿಸಲಿದೆ ಎಂದು ಮಾಜಿ ಬಿಜೆಪಿ ಹಿರಿಯ ನಾಯಕ ತಿಳಿಸಿದ್ದಾರೆ.ಇದೇ ವೇಳೆ  ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಸಿನ್ಹಾ ಅವರು, ಪ್ರಮುಖ ಮಸೂದೆಯನ್ನು ಅಂಗೀಕರಿಸುವ ಸಮಯದಲ್ಲಿ ರಾಜ್ಯಸಭೆಯನ್ನು “ಹಾಳುಮಾಡಲು  ನರೇಂದ್ರ ಮೋದಿ ಯತ್ನಿಸುತ್ತಿದ್ದಾರೆ ಎಂದು  ಆರೋಪಿಸಿದರು.

About the author

ಕನ್ನಡ ಟುಡೆ

Leave a Comment