ರಾಷ್ಟ್ರ ಸುದ್ದಿ

ಮಮತಾ ವಿರೋಧ ಪಕ್ಷಗಳ ರ‍್ಯಾಲಿಗೆ ಕುಮಾರಸ್ವಾಮಿ, ದೇವೇಗೌಡ

ಕೋಲ್ಕತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಜನವರಿ 19ರಂದು ಕೋಲ್ಕತದಲ್ಲಿ ಆಯೋಜಿರುವ ವಿರೋಧ ಪಕ್ಷಗಳ ಬೃಹತ್ ರ‍್ಯಾಲಿಯಲ್ಲಿ ಮಾಜಿ ಪ್ರಧಾನಿ ಎಚ್‍ ಡಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಗಿಯಾಗುತ್ತಿದ್ದಾರೆ.

ಈ ರ‍್ಯಾಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಹಾಗೂ ಬಿಎಸ್‌ಪಿ ನಾಯಕಿ ಮಾಯಾವತಿ ಭಾಗವಹಿಸುತ್ತಿಲ್ಲ. ವಿರೋಧ ಪಕ್ಷಗಳ ಈ ಬೃಹತ್ ರ‍್ಯಾಲಿಯನ್ನು ಈಗಾಗಲೆ ಮಮತಾ ಬ್ಯಾನರ್ಜಿ ಬಿಜೆಪಿ ಪಾಲಿಗೆ ಸಾವಿನ ಗಂಟೆ ಎಂದು ಬಣ್ಣಿಸಿದ್ದು ಸುಮಾರು 40 ಲಕ್ಷ ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಕೋಲ್ಕತದಲ್ಲಿ ನಡೆಯಲಿರುವ ವಿರೋಧ ಪಕ್ಷಗಳ ಬೃಹತ್ ರ‍್ಯಾಲಿ ವೇದಿಕೆ ಮೇಲೆ ಯಾರೆಲ್ಲಾ ಉಪಸ್ಥಿತಿ ಇರಲಿದೆ ಎಂಬ ಪಟ್ಟಿ ಇಲ್ಲಿದೆ.

ಅಖಿಲೇಶ್ ಯಾದವ್ (ಎಸ್‍ಪಿ) ಸತೀಶ್ ಮಿಶ್ರಾ (ಬಿಎಸ್‌ಪಿ)
ಚಂದ್ರಬಾಬು ನಾಯ್ಡು (ಟಿಡಿಪಿ)
ಎಂಕೆ ಸ್ಟಾಲಿನ್ (ಡಿಎಂಕೆ)  ಎಚ್ ಡಿ ಕುಮಾರಸ್ವಾಮಿ ಮತ್ತು ಎಚ್‍ ಡಿ ದೇವೇಗೌಡ(ಜೆಡಿಎಸ್)
ಖರ್ಗೆ/ಸಿಂಘ್ವಿ (ಕಾಂಗ್ರೆಸ್)
ಅರವಿಂದ್ ಕೇಜ್ರಿವಾಲ್ (ಆಪ್)
ಫರೂಕ್ ಅಬ್ದುಲ್ಲಾ ಮತ್ತು ಓಮರ್ ಅಬ್ದುಲ್ಲಾ (ಎನ್‍ಸಿ)
ತೇಜಸ್ವಿ ಯಾದವ್ (ಆರ್‌ಜೆಡಿ)
ಶರದ್ ಪವಾರ್ (ಎನ್‍ಸಿಪಿ)
ಅಜಿತ್ ಸಿಂಗ್/ಜಯಂತ್ ಚೌದರಿ (ಆರ್‌ಎಲ್‍ಡಿ)
ಯಶವಂತ್ ಸಿನ್ಹಾ
ಶರದ್ ಯಾದವ್
ಗೆಗಾಂಗ್ ಅಪಂಗ್ (ಅರುಣಾಚಲದ ಮಾಜಿ ಮುಖ್ಯಮಂತ್ರಿ)
ಅರುಣ್ ಶೌರಿ
ಹೇಮಂತ್ ಸೋರೆನ್
ಹಾರ್ದಿಕ್ ಪಟೇಲ್
ಜಿಗ್ನೇಶ್ ಮೇವಾನಿ

ಇವರ ಜತೆಗೆ ಇನ್ನಷ್ಟು ರಾಜಕೀಯ ಮುಖಂಡರು ಶುಕ್ರವಾರ ಕೋಲ್ಕತ ತಲುಪಲಿದ್ದಾರೆ. ಈಗಾಗಲೆ 40 ಲಕ್ಷ ಮಂದಿ ಕಾರ್ಯಕರ್ತರು, ಜನ ಕೋಲ್ಕತ ತಲುಪಿರುವುದಾಗಿ ಮೂಲಗಳು ತಿಳಿಸಿವೆ. ದೇವೇಗೌಡ ಮತ್ತು ಕುಮಾರಸ್ವಾಮಿ ಗುರುವಾರ (ಜ.18) ಮಧ್ಯಾಹ್ನದ ನಂತರ ಕೋಲ್ಕತ ತಲುಪಲಿದ್ದಾರೆ.

About the author

ಕನ್ನಡ ಟುಡೆ

Leave a Comment