ದೇಶ ವಿದೇಶ

ಮಯನ್ಮಾರ್ ಅಧ್ಯಕ್ಷ ಹಟಿನ್‌ ಕ್ವಾವ್‌ ಅಧಿಕಾರಕ್ಕೆ ರಾಜೀನಾಮೆ

ಮಯನ್ಮಾರ್: ಮಯನ್ಮಾರ್ ಅಧ್ಯಕ್ಷ ಹಟಿನ್‌ ಕ್ವಾವ್‌ ತಮ್ಮ ಸ್ಥಾನಕ್ಕೆ ರಾಜೀನಾಮೆ ನಿಡಿದ್ದಾರೆ.”ಜವಾಬ್ದಾರಿಗಳಿಂದ ವಿಶ್ರಾಂತಿ ಪಡೆಯುವ ಸಲುವಾಗಿ  ಕ್ವಾವ್‌ ರಾಜೀನಾಮೆ ಸಲ್ಲಿಸಿದ್ದಾರೆ” ಎಂದು ಅಧ್ಯಕ್ಷರ ಕಛೇರಿಯ ಫೇಸ್ ಬುಕ್ ಪೋಸ್ಟ್ ನಲ್ಲಿ ತಿಳಿಸಲಾಗಿದೆ.

ದೇಶದ  ಮೊದಲ ಅಧ್ಯಕ್ಷರಾದ “ಅಂಗ್ ಸಾನ್ ಸೂ ಕಿ” ಅವರ ಆಪ್ತರಾಗಿದ್ದ ಹಟಿನ್ ಕ್ವಾವ್‌ ಅವರು ಸೂ ಕಿ ಅವರ ಆದೇಶದ ಮೇರೆಗೆ ಇಷ್ಟು ದಿನ ಅಧಿಕಾರ ನಿರ್ವಹಿಸಿದ್ದರು ಎಂದು ತಿಳಿದು ಬಂದಿದೆ. ದೇಶದ ಮಾಜಿ ಆಡಳಿತಗಾರರಿಂದ ರಚಿತವಾದ ಸಂವಿಧಾನ ಸೂ ಕಿ ಅವರನ್ನು ರಾಷ್ಟ್ರಾಧ್ಯಕ್ಷ ಸ್ಥಾನದಲ್ಲಿ ಕೂರಲು ಅವಕಾಶ ನೀಡದ ಹಿನ್ನೆಲೆಯಲ್ಲಿ ಸೂ ಕಿಯವರು ಹಟಿನ್ ಕ್ವಾವ್‌  ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರು.

ಇದೇ ವೇಳೆ ಹಟಿನ್‌ ಕ್ವಾವ್‌  ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ಸ್ಥಳೀಯ ಮಾದ್ಯಮಗಳು ಕೆಲ ದಿನಗಳಿಂದಲೂ ವರದಿ ಮಾಡಿದ್ದವು. ಆದರೆ ಅಧಿಕಾರಿಗಳು ಈ ವರದಿಯನ್ನು ನಿರಾಕರಿಸಿದ್ದಾರೆ. ಮುಂದಿನ ಏಳು ಕೆಲಸದ ದಿನಗಳಲ್ಲಿ ಮಯನ್ಮಾರ್ ಗೆ ನೂತನ ಅಧ್ಯಕ್ಷರ ನೇಮಕ ಆಗಲಿದೆ ಎಂದು ಅಧ್ಯಕ್ಷರ ಕಛೇರಿ ಮೂಲಗಳು ಸ್ಪಷ್ಟಪಡಿಸಿದೆ.

 

 

About the author

ಕನ್ನಡ ಟುಡೆ

Leave a Comment