ರಾಷ್ಟ್ರ ಸುದ್ದಿ

ಮರಣದಂಡನೆ ಸಿಂಧುತ್ವ: ಸುಪ್ರೀಂ ಕೋರ್ಟ್‌ನ ವಿಭಿನ್ನ ನಿಲುವು

ಹೊಸದಿಲ್ಲಿ: ಮರಣದಂಡನೆಯ ಸಾಂವಿಧಾನಿಕ ಸಿಂಧುತ್ವ ಕುರಿತಾಗಿ ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿ ಬುಧವಾರ ವಿಭಿನ್ನ ಅಭಿಪ್ರಾಯ ವ್ಯಕ್ತವಾಯಿತು. ನ್ಯಾ. ಕುರಿಯನ್‌ ಜೋಸೆಫ್‌, ನ್ಯಾ. ದೀಪಕ್‌ ಗುಪ್ತಾ ಮತ್ತು ನ್ಯಾ. ಹೇಮಂತ್‌ ಗುಪ್ತಾ ಅವರನ್ನೊಳಗೊಂಡ ನ್ಯಾಯಪೀಠವು, 2:1 ಬಹುಮತದೊಂದಿಗೆ ಗಲ್ಲು ಶಿಕ್ಷೆ ವಿಧಿಸುವುದನ್ನು ಎತ್ತಿ ಹಿಡಿಯಿತು.

ಅಪರೂಪದಲ್ಲಿ ಅಪರೂಪದ ಪ್ರಕರಣಗಳಲ್ಲಿ ಗಲ್ಲು ಶಿಕ್ಷೆ ವಿಧಿಸುವುದನ್ನು ಉನ್ನತ ಪೀಠವು ಈಗಾಗಲೇ ಎತ್ತಿ ಹಿಡಿದಿರುವುದರಿಂದ ಇಂತಹ ಶಿಕ್ಷೆಯ ಔಚಿತ್ಯವನ್ನು ನ್ಯಾಯಮೂರ್ತಿಗಳಾದ ದೀಪಕ್‌ ಗುಪ್ತಾ ಮತ್ತು ಹೇಮಂತ್‌ ಗುಪ್ತಾ ಪುರಸ್ಕರಿಸಿದರು. ಆದರೆ, ವಿಭಿನ್ನ ನಿಲುವು ವ್ಯಕ್ತಪಡಿಸಿದ ನ್ಯಾ.ಕುರಿಯನ್‌ ಜೋಸೆಫ್‌, ಗಲ್ಲು ಶಿಕ್ಷೆಯು ಅಪರಾಧಗಳನ್ನು ತಡೆಯುವಲ್ಲಿ ಅಥವಾ ಸಂಭಾವ್ಯ ಅಪರಾಧಿಗಳಿಗೆ ಭಯ ಹುಟ್ಟಿಸುವಲ್ಲಿ ವಿಫಲವಾಗಿದೆ ಎಂದರು. ವ್ಯಕ್ತಿಯೊಬ್ಬರು ತಮಗೆ ವಿಧಿಸಿರುವ ಮರಣದಂಡನೆಯನ್ನು ಜೀವಾವಧಿಗೆ ಇಳಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಪೀಠ ಈ ಅಭಿಪ್ರಾಯಗಳನ್ನು ವ್ಯಕ್ತಪಡಿಸಿತು. ಅಭಿಪ್ರಾಯಭೇದದ ನಡುವೆಯೂ ತ್ರಿಸದಸ್ಯ ಪೀಠ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಮಾರ್ಪಡಿಸಿ ತೀರ್ಪು ನೀಡಿತು.

About the author

ಕನ್ನಡ ಟುಡೆ

Leave a Comment