ಕವಿತೆಗಳು

ಮರತೆಯಾ ಆ ದಿನ?

ನೀ ಮಿಡಿದ ನೆನಪು ಒಮ್ಮೆಲೆ ಹಾರಾಡಿದೆ
ಇಂದೇಕೋ ಮನಸು ಮುಸುಕಾಗಿದೆ
ನಮ್ಮಿಬ್ಬರ ಒಲವು ಬಿರುಕಾಗಿದೆ
ನಾದದಲ್ಲಿ ಅಪಸ್ವರವೇ ಮಿಡಿದಿದೆ

ಬಾಳಲ್ಲಿ ಜೊತೆಗಾರ ನೀನಾಗಿ ಬಂದೆ
ಮುಳ್ಳು ಹಾದಿಯೂ ಹೂವಾಗಿಸಿದೆ
ಉಸಿರಲ್ಲಿ ಉಸಿರಾಗುವೆ ನೆಂದೆ
ಹುಸಿ ಪ್ರೀತಿ ಯ ನಾ ನಂಬಿದೆ

ಹಗಲಿರುಳು ಒಂದಾಗಿ ಬೆರೆತ ಮನ
ಒಲವಲಿ ನೆನೆದೆ ಪ್ರಿಯತಮನ
ಮರೆತು ಹೋದೆಯ ಆ ದಿನ
ಬೆಡವಾದೆನಾ ಈ ದಿನ

ಸುರಭಿ ಲತಾ

About the author

ಕನ್ನಡ ಟುಡೆ

1 Comment

Leave a Comment