ರಾಷ್ಟ್ರ ಸುದ್ದಿ

ಮಲ್ಯ ಸಾಮಾನ್ಯವಾಗಿಯೇ ದೇಶ ಬಿಟ್ಟಿದ್ದರು, ಇದರ ಹಿಂದೆ ಯಾವ ಪಿತೂರಿಯೂ ಇಲ್ಲ: ನ್ಯಾಯಾಲಯಕ್ಕೆ ವಕೀಲರ ಹೇಳಿಕೆ

ಮುಂಬೈ: ವಿಜಯ್ ಮಲ್ಯ ಸಾಮಾನ್ಯವಾಗಿಯೇ ದೇಶ ಬಿಟ್ಟಿದ್ದರು, ತನಿಖಾ ಸಂಸ್ಥೆ ಹೇಳುತ್ತಿರುವಂತೆ ಇದರ ಹಿಂದೆ ಯಾವುದೇ ಸಂಶಯ ಹಾಗೂ ಪಿತೂರಿಗಳೂ ಇಲ್ಲ ಎಂದು ವಿಜಯ್ ಮಲ್ಯ ಪರ ವಕೀಲರು ಮುಂಬೈ ನ್ಯಾಯಾಲಯಕ್ಕೆ ಗುರುವಾರ ಹೇಳಿದ್ದಾರೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ವಿಜಯ್ ಮಲ್ಯ ಅವರನ್ನು ದೇಶಭ್ರಷ್ಟ ಎಂದು ಘೋಷಣೆ ಮಾಡುವಂತೆ ಜಾರಿ ನಿರ್ದೇಶನಾಲಯ ಸಲ್ಲಿಸಿದ್ದ ಅರ್ಜಿ ಕುರಿತು ಮುಂಬೈ ವಿಶೇಷ ನ್ಯಾಯಾಲಯ ವಿಚಾರಣೆ ನಡೆಸಿದ್ದು, ವಿಚಾರಣೆ ವೇಳೆ ಮಲ್ಯ ಅವರ ಪರ ವಕೀಲರು ಹೇಳಿಕೆ ನೀಡಿದ್ದಾರೆ. ವಿಚಾರಣೆ ವೇಳೆ ವಾದ ಮಂಡನೆ ಮಾಡಿರುವ ಮಲ್ಯ ಪರ ವಕೀಲ ಅಮಿತ್ ದೇಸಾಯಿಯವರು, ನನ್ನ ಕಕ್ಷಿದಾರ ಅನಿವಾಸಿ ಭಾರತೀಯನಾಗಿದ್ದು, ಲಂಡನ್ ನಲ್ಲಿ ಶಾಶ್ವತ ವಿಳಾಸವನ್ನು ಹೊಂದಿದ್ದಾರೆ. ಭಾರತದಲ್ಲಿ ಸಾಕಷ್ಟು ವ್ಯವಹಾರಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಮಲ್ಯ ಅವರು 2016ರ ಮಾರ್ಚ್ 2 ರಂದು ಭಾರತ ಬಿಟ್ಟಿದ್ದರು. ಜರ್ಮನಿ ಮೂಲಕ ಲಂಡನ್ ಪ್ರವಾಸ ಬೆಳೆಸಿದ್ದರು. ಬಳಿಕ ವರ್ಲ್ಡ್ ಮೊಟಾರ್ ಸ್ಫೋರ್ಟ್ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು. ಮಲ್ಯ ಅವರು ಅನುಮಾನಾಸ್ಪದವಾಗಿ ದೇಶ ಬಿಟ್ಟಿದ್ದರು ಎಂದು ಇಡಿ ಹೇಳುತ್ತಿದ್ದು, ಮಲ್ಯ ದೇಶ ಬಿಟ್ಟಿದ್ದರ ಹಿಂದೆ ಯಾವುದೇ ಅನುಮಾನ, ಪಿತೂರಿಗಳಿಲ್ಲ. ಸಾಮಾನ್ಯವಾಗಿಯೇ ಅವರು ಪ್ರಕರಣ ದಾಖಲಾಗುವುದಕ್ಕೂ ಮುನ್ನ ದೇಶ ಬಿಟ್ಟಿದ್ದರು ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment